ಎಲ್ಲ ಮುಸ್ಲಿಮರು ಉಗ್ರರಲ್ಲ-ಕೋಡಿಮಠ ಸ್ವಾಮೀಜಿ
ಸೋಮವಾರಪೇಟೆ,
ಜ.24: ಜಗತ್ತಿನಲ್ಲಿ ಮುಸ್ಲಿಮರೆಲ್ಲ ಭಯೋತ್ಪಾದಕರೆಂಬ ತಪ್ಪು ಕಲ್ಪನೆ ಇದೆ. ಶಾಂತಿಯನ್ನು ಬೋಧಿಸುವ ಇಸ್ಲಾಂ ಧರ್ಮದ ಅನುಯಾಯಿಗಳು ಭಯೋತ್ಪಾದಕರಾಗಲು ಸಾದ್ಯವಿಲ್ಲ. ಭಯೋತ್ಪಾದನೆ ಎಂಬುವುದು ಮುಸ್ಲಿಂ ಧರ್ಮಕ್ಕೆ ಅಂಟಿದ ಆರೋಪವಾಗಿದ್ದು, ಇದನ್ನು ಹೋಗಲಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅರಸೀಕೆರೆಯ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ. id="toptextpromo">ಕೊಡಗು
ಜಿಲ್ಲೆಯ ಸೋಮವಾರಪೇಟೆಯ ಆಲೆಕಟ್ಟೆ ರಸ್ತೆಯ ಮಲಂಗ್ ಷಾವಲಿ ಯೂತ್ ಕಮಿಟಿ ವತಿಯಿಂದ ಅಲ್ಲಿನ ಕೊಡವ ಸಮಾಜದಲ್ಲಿ ಪಾಣಕ್ಕಾಡ್ ಸಯ್ಯದ್ ಶಮೀರಲಿ ಶಿಹಾಬ್ ತಂಙಳ್ ನೇತೃತ್ವದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಮತ್ತು ಭಾವೈಕ್ಯತಾ ಸಮಾವೇಷದಲ್ಲಿ ಅವರು ಸೋಮವಾರ ಮಾತನಾಡಿದರು. id='are-slot-1' class='oiad oi-axt oiadv'> id='top-searched-articles'>ಜಗತ್ತಿಗೆ
ಜೀವನ ಮೌಲ್ಯದ ಬಹುದೊಡ್ಡ ಕೊಡುಗೆ ನೀಡಿದ ಇಸ್ಲಾಂ ಧರ್ಮವು ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದೆ ಎಂದ ಅವರು ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ; ಭಯೋತ್ಪಾದಕರೆಲ್ಲಾ ಶಾಂತಿ ಬೋಧಿಸುವ ಮುಸ್ಲಿಂ ಧರ್ಮದ ಅನುಯಾಯಿಗಳಲ್ಲ ಎಂದು ವ್ಯಾಖ್ಯಾನಿಸಿದರು.











Click it and Unblock the Notifications