ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿಬಜಾರ್ ಮಾರುಕಟ್ಟೆಗಳು ಪೀಸ್ ಪೀಸ್ : ಜನ ಸಂತಸ

By Srinath
|
Google Oneindia Kannada News

gandhi-bazaar-markets-razed-people-happy
ಬೆಂಗಳೂರು, ಜ.24: Never in my wildest dreams i imagined this - ಗಾಂಧಿಬಜಾರಿನ ಹಿರಿಯರೊಬ್ಬರು ಮಂಗಳವಾರ ಬೆಳ್ಳಂಬೆಳಗ್ಗೆ ಗಾಂಧಿಬಜಾರ್ ಮಾರುಕಟ್ಟೆ ನೆಲಸಮವಾಗಿರುವುದನ್ನು ಕಂಡು ಉದ್ಘರಿಸಿದ್ದು ಹೀಗೆ. ಮತ್ತು, ಬಿಬಿಎಂಪಿಯ ಜೆಸಿಬಿ ಕಾರ್ಯಾಚರಣೆ ಬಗ್ಗೆ ಜನ ಏನು ಅಂದಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಮಾತು ಷರಾ ಬರೆದಂತಿತ್ತು.

ಗಾಂಧಿಬಜಾರ್ ಹೂ ಮಾರುಕಟ್ಟೆಗಳ ಧ್ವಂಸ'ದ ಸಮಗ್ರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. (Pics by Sadhu)
ಹೌದು. ಗಾಂಧಿಬಜಾರ್ ಹೂ-ಹಣ್ಣು ಮಾರುಕಟ್ಟೆ ಚೆಲ್ಲಾಪಿಲ್ಲಿಯಾಗಿ ಶಾಶ್ವತವಾಗಿ ನೆಲೆ ಕಳೆದುಕೊಂಡಿರುವುದನ್ನು ನೋಡಿ ಮಮ್ಮಲ ಮರುಗುವವರು ಅಲ್ಲಿ ಯಾರೊಬ್ಬರೂ ಇರಲಿಲ್ಲ; except ಆ ಅಂಗಡಿಗಳ ಜನ. ಇಡೀ ಬೆಂಗಳೂರು ದಕ್ಷಿಣ ಭಾಗದಲ್ಲಿ ಇದರದೇ ಚರ್ಚೆ. ಎಲ್ಲ ಅಂಗಡಿಮುಂಗಟ್ಟುಗಳಲ್ಲಿ, ಬಸ್ಸುಗಳಲ್ಲಿ, ಸಾರ್ವಜನಿಕರಿಗೆ ಈ ಸುದ್ದಿ ಸಖತ್ ಬ್ರೇಕ್ ಫಾಸ್ಟ್ ಆಗಿದೆ.

ದಶಕಗಳಿಂದ ಕಾಲಿಗೆ ತೊಡರಿಕೊಳ್ಳುತ್ತಿದ್ದ ಗಾಂಧಿಬಜಾರ್ ಮಾರುಕಟ್ಟೆ ಧ್ವಂಸವಾಗಿದ್ದರ ಬಗ್ಗೆ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನು ಕಾರ್ಯಗತಗೊಳಿಸಿದ್ದು ಯಾರೋ ಗೊತ್ತಿಲ್ಲ. ಆದರೆ ಇಂತಹ ಖಡಕ್ ನಿರ್ಧಾರ ತೆಗೆದುಕೊಂಡ ಆ ಪುಣ್ಯಾತ್ಮನಿಗೆ ಇಲ್ಲಿನದೇ ಹೂಹಣ್ಣು ಕೊಟ್ಟು ಅಭಿನಂದಿಸುತ್ತೇವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

English summary
BBMP has demolished all the flower markets, fruit stalls and vegetable stalls in Gandhi Bazaar, Bangalore on Jan 23 midnight. The area people are happy as the Gandhi Bazaar flower markets razed to round.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X