ಬೆಂಗಳೂರು ರಸ್ತೆಗೆ ವೋಲ್ವೋ ಹೈಬ್ರಿಡ್ ಬಸ್

R Ashok
ಬೆಂಗಳೂರು, ಜ.23: ಸಾರ್ವಜನಿಕರ ಸೇವೆಗೆ ವೈವಿಧ್ಯಮಯ ಬಸ್ ಗಳನ್ನು ಒದಗಿಸುವಲ್ಲಿ ಹೆಸರುವಾಸಿಯಾಗಿರುವ ಬಿಎಂಟಿಸಿ ಈಗ ಹೈಬ್ರಿಡ್ ಬಸ್ ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ಅತ್ಯಾಧುನಿಕ ಮತ್ತು ಸುಸಜ್ಜಿತ ಬಸ್ ಸಂಚಾರಕ್ಕೆ ಬಸ್ ಗಳನ್ನು ಒದಗಿಸಲು ವೋಲ್ವೋ ಸಂಸ್ಥೆ ಒಪ್ಪಿಕೊಂಡಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬ್ಯಾಟರಿ ಚಾಲಿತ(ಎಲೆಕ್ಟ್ರಿಕ್) ಬಸ್ ಗಳಿಂದ ಶೇ.30 ರಷ್ಟೂ ಡೀಸೆಲ್ ಉಳಿಸಬಹುದು. ಇದು ಪರಿಸರ ಮಾಲಿನ್ಯವನ್ನು ಕಡಿಮೆಮಾಡಲಿದೆ ಎಂದು ಅಶೋಕ್ ಹೇಳಿದರು.

ಹೊಸ ಡಿಪೋಗಳು: ತುಮಕೂರು, ಚಳ್ಳಕೆರೆ, ಉಡುಪಿ, ಹಾಸನ, ಪುತ್ತೂರು ಹಾಗೂ ಮೈಸೂರುಗಳಲ್ಲಿ ಹೊಸ ಬಸ್ ಡಿಪೋಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು. ದೇವನಹಳ್ಳಿಯಲ್ಲಿ 3.24 ಎಕರೆ ಪ್ರದೇಶದಲ್ಲಿ ಬಿಎಂಟಿಸಿ ಬಸ್ ಡಿಪೋ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 3.60 ಕೋಟಿ ರು ಅಂದಾಜು ವೆಚ್ಚವಾಗಲಿದೆ ಎಂದರು.

ಕಮಾಂಡೋ ಪಡೆ: ಭಯೋತ್ಪಾದಕ ಕೃತ್ಯಗಳ ನಿಗ್ರಹಕ್ಕಾಗಿ ಪ್ರತ್ಯೇಕವಾಗಿ ಆರಂಭಿಸಿರುವ ಕಮಾಂಡೋ ಪಡೆ ಬೆಂಗಳೂರಿನಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. 300 ಜನರ ಪಡೆಗೆ ಹೆಚ್ಚುವರಿ 80 ಜನರನ್ನು ನಿಯೋಜಿಸಲಾಗಿದೆ. ಮಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಬೆಳಗಾವಿಯಲ್ಲಿ ಕಮಾಂಡೋ ಪಡೆಗಳನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವರೂ ಆಗಿರುವ ಆರ್ ಅಶೋಕ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+