ಪ್ರಿಯಕೃಷ್ಣ ಅಕ್ರಮ ಆಸ್ತಿ ಗಳಿಕೆ ಲೆಕ್ಕ ಎಷ್ಟಿದೆ?

ಚುನಾವಣಾ ಆಯೋಗಕ್ಕೆ ಒಂದು ಮಾಹಿತಿ, ಲೋಕಾಯುಕ್ತಕ್ಕೆ ಮತ್ತೊಂದು ಮಾಹಿತಿ ನೀಡಿದ್ದಾರೆ. ಎರಡು ಸಂಸ್ಥೆಗಳು ತಿಳಿಸಿರುವ ಆಸ್ತಿ ವಿವರಗಳ ನಡುವೆ ತಾಳೆ ಹಾಕಿ ನೋಡಿದರೆ ಸರಿಯಾದ ಲೆಕ್ಕ ಸಿಗುವುದಿಲ್ಲ.
ಘೋಷಿಸಿರುವ ಆಸ್ತಿ ವಿವರಗಳಲ್ಲಿ ಸುಮಾರು 700 ಕೋಟಿ ರೂ. ನಷ್ಟು ವ್ಯತ್ಯಾಸವಿದೆ. ಆರೋಪಿಗಳು ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎಂದು ವಕೀಲ ಪ್ರಕಾಶ್ ಆರೋಪಿಸಿದ್ದಾರೆ.
ಶಾಸಕ ಎಂ.ಕೃಷ್ಣಪ್ಪ ಅವರ ಕುಟುಂಬ ಸದಸ್ಯರಾದ ಪ್ರಿಯಾದರ್ಶಿನಿ, ಪ್ರಿಯಕೃಷ್ಣ, ಪ್ರದೀಪ್ ಹೆಸರಿನಲ್ಲಿ ಯಶವಂತಪುರ, ಗೆದ್ದಲಹಳ್ಳಿ ಹಾಗೂ ಇನ್ನಿತರ ಕಲ್ಯಾಣಮಂಟಪ, ವಾಣಿಜ್ಯ ಸಂಕೀರ್ಣ ಸೇರಿದಂತೆ ನೂರಾರು ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ.
ಮಾಗಡಿ ಬಳಿ 600 ಎಕರೆ ಭೂಮಿ ಸೇರಿದಂತೆ ನಗರದ ಸುತ್ತಮುತ್ತು ಸುಮಾರು 2000 ಎಕರೆ ಜಮೀನು ಹೊಂದಿದ್ದಾರೆ. ಈ ಅಸ್ತಿವಿವರಗಳಿಗೆ ಸರಿಯಾದ ದಾಖಲಾತಿ ಹೊಂದಿಲ್ಲ.
ಶಾಸಕ ಸ್ಥಾನ ದುರ್ಬಳಕೆ ಎದ್ದು ಕಾಣುತ್ತಿದ್ದು, ತನಿಖೆ ನಡೆಸಬೇಕು ಎಂದು ವಕೀಲ ಪ್ರಕಾಶ್ ಮನವಿ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ ಈಗ ಲೋಕಾಯುಕ್ತ ನ್ಯಾ. ಸುಧೀಂದ್ರರಾವ್ ಅವರ ಆದೇಶದ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications