ಕಿಂಗ್ ಫಿಷರ್ ಸಂಕಷ್ಟ: ಕೈ ಎತ್ತಿದ UB Group
ಬೆಂಗಳೂರು,
ಜ. 17: ಆರ್ಥಿಕ ಸಂಕಷ್ಟದಲ್ಲಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಕಂಪನಿಗೆ ಅದರದೇ ಸೋದರ ಸಂಸ್ಥೆ ಯುಬಿ ಗ್ರೂಪ್ ಆರ್ಥಿಕ ನೆರವು ನೀಡಲು ಹಿಂಜರಿದಿದೆ! id="toptextpromo">ಕಿಂಗ್
ಫಿಷರ್ ಏರ್ ಲೈನ್ಸ್ ಆರ್ಥಿಕ ಸಂಕಷ್ಟ ಜಗಜ್ಜಾಹೀರಾಗಿದೆ. ಆದರೆ ಪ್ರಪಂಚದ ನಾನಾ ಭಾಗಗಳಲ್ಲಿರುವ ಮದ್ಯದ ಆಸ್ತಿಯಲ್ಲಿ ಒಂದು ಪೈಸೆಯನ್ನೂ ಕಿಂಗ್ ಫಿಷರ್ ಕಂಪನಿಗೆ ನೀಡೊಲ್ಲ ಎಂದು UB Group ಮುಖ್ಯಸ್ಥರು ಹೇಳಿದ್ದಾರೆ. ಆದರೆ UB Group ಸಮೂಹದಲ್ಲಿರುವ ಮದ್ಯ, ಏರ್ ಲೈನ್ಸ್, ಕ್ರೀಡಾ ಸಂಸ್ಥೆಯು ಕಿಂಗ್ ಫಿಷರ್ ಸಂಕಷ್ಟಕ್ಕೆ ಮುಂಧಾಗಬೇಕು ಎಂಬ ಕೂಗು ಎಲ್ಲೆಡೆ ಎದ್ದಿದೆ. id='are-slot-1' class='oiad oi-axt oiadv'> id='top-searched-articles'>ವಾಸ್ತವವಾಗಿ,
UB Group ಛತ್ರಿಯಡಿ ಬರುವ ಎಲ್ಲ ಸಂಸ್ಥೆಗಳೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಸಂಸ್ಥೆಯ ಹಣಕಾಸು, ಆಸ್ತಿಯನ್ನು ಮತ್ತೊಂದು ಸಂಸ್ಥೆಗೆ ವರ್ಗಾಯಿಸುವ ಪರಿಪಾಠವಿಲ್ಲ ಎಂದು ಕಿಂಗ್ ಫಿಷರ್ ಸಂಕಷ್ಟಕ್ಕೆ ನೆರವಾಗುವ ಸಾಧ್ಯತೆಯನ್ನು UB Group ಮುಖ್ಯ ಹಣಕಾಸು ಅಧಿಕಾರಿ ರವಿ ನೆಡುಂಗಡಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.











Click it and Unblock the Notifications