ಸಿದ್ದರಾಮಯ್ಯ ಅಹಿಂದದಲ್ಲಿಯೇ ಇದ್ದಿದ್ದರೆ ಚೆನ್ನಾಗಿತ್ತು
ಶಿವಮೊಗ್ಗ,
ಜ13: ರಾಜ್ಯದಲ್ಲಿನ ರಾಜಕೀಯ ಜಂಟಾದಿಂದ ಬೇಸತ್ತು ಜಮ್ಮಂಥ ಆಸ್ಟ್ರೇಲಿಯಾಕ್ಕೆ ತೆರಳಿರುವ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಟಾಂಗ್ ನೀಡಿದ್ದಾರೆ. 'ಸಿದ್ದರಾಮಯ್ಯನವರೇ ಕಾಂಗ್ರೆಸ್‌ನಲ್ಲಿ ನಿಮಗೆ ಯಾವುದೇ ಭವಿಷ್ಯವಿಲ್ಲ. ನೀವು ಅಹಿಂದದಲ್ಲಿಯೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಹಿತವಚನ ಹೇಳಿದ್ದಾರೆ. id="toptextpromo">ಸಿದ್ದರಾಮಯ್ಯ
ಕುರಿತು ಗುರುವಾರ ಮೃದು ಧಾಟಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಸಿದ್ದರಾಮಯ್ಯ ಒಳ್ಳೆಯ ನಾಯಕರು. ಆದರೆ ಅವರಿಗೆ ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ಸಿಗುವುದಿಲ್ಲ. ಅವರು ಈಗಾಗಲೇ ಒಂದು ಕಾಲನ್ನು ಅಲ್ಲಿಂದ ಹೊರಗೆ ಇಟ್ಟಂತೆ ಕಾಣುತ್ತಿದೆ. ನನ್ನ ಈ ಮಾತಿನಿಂದ ಅವರು ಬೇಸರ ಮಾಡಿಕೊಳ್ಳಬಾರದು. ಇದು ನನ್ನ ಅನಿಸಿಕೆ. ಅವರು ಯಾವ ಪಕ್ಷಕ್ಕೆ ಹೋಗಬೇಕೆಂಬುದು ಅವರೇ ನಿರ್ಧರಿಸುತ್ತಾರೆ' ಎಂದರು. id='are-slot-1' class='oiad oi-axt oiadv'> id='top-searched-articles'>ಸ್ವತಂತ್ರ
ವ್ಯಕ್ತಿತ್ವದ
ಸಿದ್ದು
ಬಿಜೆಪಿಗಾ!?
:
ಅವರು
ಬಿಜೆಪಿಗೆ
ಬರುತ್ತಾರೆಯೇ
ಎಂಬ
ಪ್ರಶ್ನೆಗೆ,
ಸಿದ್ದರಾಮಯ್ಯನವರು
ಸ್ವತಂತ್ರ
ವ್ಯಕ್ತಿತ್ವವನ್ನು
ಪ್ರದರ್ಶಿಸುವವರು.
ಅವರಿಗೆ
ಬೇರೆ
ಪಕ್ಷಗಳು
ಅಷ್ಟಾಗಿ
ಒಗ್ಗಿಕೊಳ್ಳುವುದಿಲ್ಲ.
ಕಾಂಗ್ರೆಸ್
ನಾಯಕ
ಮಿಸ್ತ್ರಿ
ಆಗಮನದ
ಸಂದರ್ಭದಲ್ಲಿ
ನಾಯಕರ
ಜೊತೆಗೆ
ಸಿದ್ದರಾಮಯ್ಯ
ಅವರನ್ನು
ಭೇಟಿಯಾಗಲಿಲ್ಲ.
ಭೇಟಿಯಾಗಿ
ಏನು
ಮಾಡುವುದು
ಎಂಬ
ಸಮಸ್ಯೆ
ಅವರದ್ದಾಗಿರಬೇಕು.
ಅದು
ಸರಿ
ಕೂಡ'
ಎಂದು
ಕಟಕಿಯಾಡಿದರು.












Click it and Unblock the Notifications