ಒಂದು ರಾತ್ರಿಗೆ 70 ಲಕ್ಷ ರು. ಪಾವತಿಸಿದ ಕುಬೇರ

ಒಬ್ಬ ಅನಾಮಧೇಯ ವ್ಯಕ್ತಿ, ಕ್ಷಮಿಸಿ ಶ್ರೀಮಂತ ಬಿಲ್ ಪಾವತಿಸಿದ್ದು ಅನಾಮತ್ 70 ಲಕ್ಷ ರು. ಓದೋದುತ್ತಲೇ ಕುರ್ಚಿಯಿಂದ ದಬಕ್ಕನೆ ಬಿದ್ದೀರಿ ಜೋಕೆ! ಇದು ಆಶ್ಚರ್ಯವಾದರೂ ನಿಜವಾದ ಸಂಗತಿ. ಅಬುಧಾಬಿಯ ಎಮಿರೇಟ್ಸ್ ಪ್ಯಾಲೇಸ್ ಹೋಟೆಲಿನ ನೈಟ್ ಕ್ಲಬ್ ನಲ್ಲಿ ಆತ ಬಿಲ್ ನೋಡಿ ಖುದ್ದು ಅದರ ಮಾಲಿಕನೇ ಹೌಹಾರಿದ್ದಾನೆ.
ಲಿಟೈಲ್ಸ್ ನೈಟ್ ಕ್ಲಬ್‌ಗೆ ಬರುವವರೆಲ್ಲ ಆಗರ್ಭ ಶ್ರೀಮಂತರೆ. ಆದರೆ ಒಂದು ರಾತ್ರಿಯ ಬಿಲ್ ಇಷ್ಟಾಗಿದೆಯೆಂದು ನಂಬಲು ಹೋಟೆಲಿನ ಕೆಲಸಗಾರರೇ ಬಿಲ್‌ಕುಲ್ ತಯಾರಿಲ್ಲ. ಸುಜಿತ್ ಪಿಳ್ಳೈ ಎಂಬ ಮ್ಯಾನೇಜರ್ ಆ ಆಗಂತುಕನ ವಿವರಗಳನ್ನು ನೀಡಲು ತಯಾರಿಲ್ಲ.
ಅಷ್ಟೊಂದು ಖರ್ಚು ಮಾಡಲು ಆ ಕುಬೇರನ ಪುತ್ರ ಏನು ಮಾಡಿದ? ಏನೆಲ್ಲ ಅಲ್ಲಿ ತಿಂದ? ಯಾರ್ಯಾರ ಜೊತೆ ಅಲ್ಲಿಗೆ ಬಂದಿದ್ದ ಎಂಬಿತ್ಯಾದಿ ಯಾವ ವಿವರಗಳನ್ನು ಹೋಟೆಲ್ ಸಿಬ್ಬಂದಿಗಳು ನೀಡಲು ನಿರಾಕರಿಸುತ್ತಿದ್ದಾರೆ. ಅದು ಹೋಟೆಲಿನ ಶಿಷ್ಟಾಚಾರಕ್ಕೆ ವಿರುದ್ಧವಾದುದು ಎಂದು ಅವರು ಹೇಳುತ್ತಿದ್ದಾರೆ.












Click it and Unblock the Notifications