ಅಫ್ಟಾನ್ ವಿಡಿಯೋ, ಹಿಲ್ಲರಿ ಕ್ಲಿಂಟನ್ ಕ್ಷಮೆಯಾಚನೆ
ವಾಷಿಂಗ್ಟನ್,
ಜ. 13: ಮೃತ ತಾಲಿಬಾನ್ ಹೋರಾಟಗಾರರ ದೇಹಗಳ ಮೇಲೆ ಅಮೆರಿಕನ್ ಸೈನಿಕರು ಮೂತ್ರ ಮಾಡುವುದನ್ನು ತೋರಿಸಿದ ವೀಡಿಯೊ ಬಗ್ಗೆ ತನಿಖೆ ನಡೆಸಲಾಗುವುದು. ಈ ಘಟನೆಗೆ ನಾನು ಕ್ಷಮೆ ಕೋರುತ್ತೇನೆ ಎಂದು ಅಮೆರಿಕ ಸರ್ಕಾರದ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್ ಹೇಳಿದ್ದಾರೆ. id="toptextpromo">ಈ
ವಿಡಿಯೋ ಯು-ಟ್ಯೂಬ್ ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಮರೀನ್ ಹೋರಾಟ ಸಮವಸ್ತ್ರದಲ್ಲಿರುವ ನಾಲ್ಕು ಮಂದಿ ಮೂವರು ಮೃತ ತಾಲಿಬಾನ್ ಯೋಧರ ದೇಹಗಳ ಮೇಲೆ ಮೂತ್ರ ಮಾಡುವುದನ್ನು ಈ ವಿಡಿಯೊ ತೋರಿಸುತ್ತದೆ. ಅವರ ಪೈಕಿ ಒಬ್ಬಾತ ಹೀಗೆ ತಮಾಷೆ ಮಾಡುತ್ತಾನೆ: 'ಈ ದಿನ ಶುಭವಾಗಲಿ, ಗೆಳೆಯ'. ಇನ್ನೊಬ್ಬ ಅಶ್ಲೀಲ ಹಾಸ್ಯ ಚಟಾಕಿಯೊಂದನ್ನು ಹಾರಿಸುತ್ತಾನೆ. id='are-slot-1' class='oiad oi-axt oiadv'> id='top-searched-articles'>'ಈ
ವೀಡಿಯೊದ ಮೂಲ ಅಥವಾ ಸತ್ಯಾಸತ್ಯತೆಯನ್ನು ನಾವು ಇನ್ನೂ ಪರಿಶೀಲಿಸಿಲ್ಲ. ಆದರೆ, ಈ ವಿಷಯವನ್ನು ಪೂರ್ಣವಾಗಿ ತನಿಖೆಗೊಳಪಡಿಸಲಾಗುವುದು. ವೀಡಿಯೊ ನೈಜವಾಗಿದೆ ಎಂದು ಪೆಂಟಗನ್ ಕೂಡಾ ಹೇಳಿದೆ. ಈ ಕೃತ್ಯ ಎಸೆಗಿದವರಲ್ಲಿ ಇಬ್ಬರು ಉತ್ತರ ಕರೋಲಿನಾ ಬೆಟಾಲಿನ್ ಗೆ ಸೇರಿದವರು ಎಂದು ತಿಳಿದುಬಂದಿದೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಲರಿ ಹೇಳಿದ್ದಾರೆ.











Click it and Unblock the Notifications