'ಜೆಡಿಎಸ್ ಅಪ್ಪ-ಮಕ್ಕಳು ರಾಜ್ಯವನ್ನೇ ನಿಮ್ಹಾನ್ಸ್ ಮಾಡಿದ್ದಾರೆ'

ಜೆಡಿಎಸ್ ಪಕ್ಷದ ಹೆಸರಿನಲ್ಲಿ ಅಪ್ಪ-ಮಗ ಸೇರಿಕೊಂಡು ಇಡೀ ರಾಜ್ಯವನ್ನೇ ನಿಮ್ಹಾನ್ಸ್ ಆಗಿ ಪರಿವರ್ತಿಸಿದ್ದಾರೆ. ಬಿಜೆಪಿಯ ಜತೆ ಕೈಜೋಡಿಸಿ ರಾಜ್ಯದ ಆಡಳಿತವನ್ನು ಹದಗೆಡುವ ಪರಿಸ್ಥಿತಿಗೆ ತಂದವರು ಯಾರು? ಬಿಜೆಪಿ ಅಧಿಕಾರಕ್ಕೆ ಬರಲು ಈ ಅಪ್ಪ-ಮಗನೇ ಕಾರಣ ಎಂದು ಆರೋಪಿಸಿದರು.
ಕಳೆದ ವಾರವಷ್ಟೇ ಕುಮಾರಸ್ವಾಮಿ ಅವರು ವಿಶ್ವನಾಥ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ದೇವೇಗೌಡರ ಕುಟುಂಬವನ್ನು ಬೈಯ್ದುಕೊಂಡೇ ವಿಶ್ವನಾಥ್ ಹೊಟ್ಟೆ ಹೊರೆಯುತ್ತಿದ್ದಾರೆ. ಅವರಿಗೆ ಬುದ್ಧಿ ಭ್ರಮಣೆಯಾಗಿದ್ದು, ನಿಮ್ಹಾನ್ಸ್ ಸೇರಲಿ ಎಂದು ಕುಮಾರಸ್ವಾಮಿ ಹೇಳಿದ್ದರು.
ತಲೆ ಮೇಲೆ ಟವೆಲ್ ಹಾಕಿಕೊಂಡು ಗುಂಡೂರಾವ್ ಮನೆಗೆ...: 'ರಾತ್ರಿ ಹೊತ್ತಲ್ಲಿ ತಲೆ ಮೇಲೆ ಟವೆಲ್‌ನ ಮುಸುಕು ಹಾಕಿಕೊಂಡು ಮುಖ್ಯಮಂತ್ರಿಗಳ ಮನೆಗೆ ಹೋಗಿ ತಮ್ಮ ಕೆಲಸದ 'ಡೀಲ್' ಮುಗಿಸಿಕೊಂಡು ಬರುವ ದೇವೇಗೌಡರಂತೆ ಎಲ್ಲರೂ ಇರುವುದಿಲ್ಲ. ಅವರ ಸುಪುತ್ರ ಕುಮಾರಸ್ವಾಮಿ ನಾನು ಡೀಲ್ ಮಾಡುವುದಾಗಿ ಹೇಳಿದ್ದಾರೆ. ಆದರೆ ರಾಜ್ಯದಲ್ಲಿ ಡೀಲ್ ಸಂಸ್ಕೃತಿಯನ್ನು ಹುಟ್ಟುಹಾಕಿದ್ದೇ ಕುಮಾರ ಅವರ ಪಿತಾಶ್ರೀ ಎಂಬುದು ಅವರಿಗೆ ನೆನಪಿರಲಿ ಎಂದು ವ್ಯಂಗ್ಯವಾಡಿದರು.
'ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರು ರಾತ್ರೋ ರಾತ್ರಿ ತಲೆಯ ಮೇಲೆ ಟವಲ್ ಹೊದ್ದುಕೊಂಡು ಹೋಗಿ, ತಮ್ಮ ಕೆಲಸದ ಡೀಲ್ ಮುಗಿಸಿಕೊಂಡಿದ್ದರು. ಈ ಸಂಸ್ಕೃತಿಗೆ ಕಾರಣರಾಗಿರುವ ಅಪ್ಪನ ಬಗ್ಗೆ ಮಗನಿಗೆ ಗೊತ್ತಿಲ್ಲ ಎನ್ನಿಸುತ್ತದೆ. ಪಾಪ, ಅದಕ್ಕೇ ನನ್ನ ವಿರುದ್ದ ಡೀಲ್‌ನ ಆರೋಪ ಹೊರಿಸುತ್ತಿದ್ದಾರೆ' ಎಂದು ಟೀಕಿಸಿದರು.











Click it and Unblock the Notifications