ಮುಸ್ಲೀಮರಿಗೆ ಮೀಸಲಾತಿ, ದೇಶಕ್ಕೆ ಕೆಡಕು: ಮೋದಿ

Narendra Modi
ಅಹಮದಾಬಾದ್, ಜ.8: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಮುಸ್ಲೀಮರಿಗೆ ಮೀಸಲಾತಿ ನೀಡುವ ಬಗ್ಗೆ ಘೋಷಿಸಿರುವುದು ಅಕ್ಷಮ್ಯ. ಮುಸ್ಲೀಮರಿಗೆ ಮೀಸಲಾತಿ ನೀಡಿದರೆ ದೇಶಕ್ಕೆ ಕೆಡಕು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇತರೆ ಹಿಂದುಳಿದ ವರ್ಗ (ಒಬಿಸಿ) ಶೇ.27ರ ಕೋಟಾದಡಿಯಲ್ಲಿ ಮುಸ್ಲಿಮರಿಗೆ ಶೇ.4.5 ಮೀಸಲಾತಿ ಕಲ್ಪಿಸುವ ಯುಪಿಎ ಸರ್ಕಾರದ ಉದ್ದೇಶಿತ ನಿರ್ಧಾರದ ವಿರುದ್ಧ ಈಗಾಗಲೇ ವಿಶ್ವ ಹಿಂದೂ ಪರಿಷತ್ ತಿರುಗಿ ಬಿದ್ದಿದೆ.

ಯುಪಿಎ ಸರ್ಕಾರ ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಧರಣಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಮತ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಅತ್ಯಂತ ಕೆಟ್ಟ ಕ್ರಮವಾಗಿದೆ. ಸಮಾಜದ ಆರೋಗ್ಯಮಯ ವಾವಾವರಣವನ್ನು ಕೆದಡುವ ಯತ್ನದಲ್ಲಿರುವ ಕಾಂಗ್ರೆಸ್ ಗೆ ಎಂದೂ ಜಯ ಸಿಗುವುದಿಲ್ಲ.

ನಾನು ಕೂಡಾ ಇತರೆ ಹಿಂದುಳಿದ ವರ್ಗಕ್ಕೆ ಸೇರಿದವನು. ಆದರೆ, ನಾನು ಎಂದು ನನ್ನ ಸಮುದಾಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿಲ್ಲ ಎಂದು ನರೇಂದ್ರ ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+