ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಯಾವತಿ ಪ್ರತಿಮೆಗಳು ನೆಲಕ್ಕೆ, ಕಾಂಗ್ರೆಸ್ ಸಂತಸ

By Mahesh
|
Google Oneindia Kannada News

Mayawati
ಲಖ್ನೋ, ಜ.8: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಾಯಾವತಿ ಮತ್ತು ಅವರ ಬಹುಜನ ಸಮಾಜವಾದಿ ಪಕ್ಷದ ಚಿಹ್ನೆ ಆನೆಯ ಪ್ರತಿಮೆಗಳನ್ನು ಮುಚ್ಚುವಂತೆ ಚುನಾವಣಾ ಆಯೋಗ ನೀಡಿರುವ ಆದೇಶವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ಫೆ.4ರಿಂದ 28ರವರೆಗೆ ನಡೆಯಲಿರುವ ಏಳು ಹಂತದ ಚುನಾವಣೆ ಮುಗಿಯುವವರೆಗೂ ಲಕ್ನೊ, ನೋಯ್ಡಾ ಸೇರಿದಂತೆ ರಾಜ್ಯದ ವಿವಿಧೆಡೆ ಸ್ಥಾಪಿಸಲಾಗಿರುವ ಮಾಯಾವತಿ ಮತ್ತು ಆನೆಯ ಪ್ರತಿಮೆಗಳು ಸ್ವಲ್ಪವೂ ಕಾಣದಂತೆ ಮುಚ್ಚುವಂತೆ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಶಿ ಆದೇಶಿಸಿದ್ದಾರೆ.

ಬಿಎಸ್ ಪಿ ವರಿಷ್ಠೆ ಮಾಯಾವತಿ ಅವರ ಪ್ರತಿಮೆಗಳನ್ನು ಉತ್ತರ ಪ್ರದೇಶ ಚುನಾವಣೆ ನಂತರ ನೆಲಕ್ಕುರಳಿಸಲಾಗುವುದು. ವಿದೇಶದಲ್ಲಿ ಸರ್ವಾಧಿಕಾರಿಗಳಿಗೆ ಆದ ಗತಿ ಮಾಯಾ ಅವರಿಗೂ ಆಗಲಿದೆ ಎಂದು ಸಮಾಜವಾದಿ ಪಕ್ಷ ಈ ಮುಂಚೆ ಪ್ರಕಟಿಸಿತ್ತು.

English summary
Congress hailed the Election Commission's decision to cover the statues of Chief Minister Mayawati and her party symbol the elephant installed at a number of places in poll-bound Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X