ಬಿಜೆಪಿಯಿಂದ ಯಡಿಯೂರಪ್ಪರನ್ನು ಉಚ್ಚಾಟಿಸಿ

ಮೈಸೂರಿನಲ್ಲಿ ಭಾನುವಾರ ಸಭೆ ಸೇರಿದ್ದ ಬಿಜೆಪಿಯ ಹಿರಿಯ ನಾಯಕರ ಸಭೆಯಲ್ಲಿ ಸಿಎಂ ಸದಾನಂದ ಗೌಡರ ಗುರುಗಳಾದ ರಾಮಭಟ್ ಹಾಗೂ ಮಾಜಿ ಶಾಸಕ ಬಿಬಿ ಶಿವಪ್ಪ ಮುಂತಾದವರು ಪಾಲ್ಗೊಂಡಿದ್ದರು.
ಯಡಿಯೂರಪ್ಪ ಅವರು ಬೇಕಾದರೆ ಹೊಸ ಪಕ್ಷ ಕಟ್ಟಲಿ ಆದರೆ, ಬಿಜೆಪಿಯಲ್ಲೇ ಇದ್ದು ಪಕ್ಷ ಕೊಳೆಯುವಂತೆ ಮಾಡುವುದು ಬೇಡ. ಪಕ್ಷದ ಆಂತರಿಕ ಬಿಕ್ಕಟ್ಟು, ಭ್ರಷ್ಟಾಚಾರಕ್ಕೆ ಯಡಿಯೂರಪ್ಪ ಅವರೇ ಪ್ರಧಾನ ಕಾರಣ.
ಯಡಿಯೂರಪ್ಪ ಅವರಿಂದ ಯಾರಿಗೂ ಉಳಿಗಾಲವಿಲ್ಲ. ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಿಜೆಪಿ ಬೆಳೆಯಬೇಕಿಲ್ಲ. ಪಕ್ಷದಿಂದ ಕೂಡಲೇ ಉಚ್ಚಾಟಿಸುವಂತೆ ಹೈಕಮಾಂಡ್ ಗೆ ಆಗ್ರಹಿಸುತ್ತೇವೆ ಎಂದು ರಾಮ್ ಭಟ್ ಹೇಳಿದರು.












Click it and Unblock the Notifications