ಗೋಕಾಕದ ರೆಸಾರ್ಟ್ ನಲ್ಲಿ 12+ ಬಿಜೆಪಿ ಶಾಸಕರು

'ನಾವು ಇಲ್ಲಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ತಂದೆಯ ಪುಣ್ಯತಿಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇವೆ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ' ಎಂದು ಸಚಿವ ಕಾರಜೋಳ ಹೇಳಿದ್ದಾರೆ.
ಆದರೆ, ಐವರು ಪಕ್ಷೇತರ ಶಾಸಕರು, ಆರು ಮಂದಿ ಬಿಜೆಪಿ ಶಾಸಕರು ಜೊತೆ ಜೊತೆಯಲ್ಲಿ ಹೀಗೆ ಕಾಣಿಸಿಕೊಂಡಿರುವುದು ಹಲವು ಊಹಾಪೋಹಕ್ಕೆ ಎಡೆಮಾಡಿದೆ. ಗೋಕಾಕದಿಂದ ಗೋವಾ ರೆಸಾರ್ಟ್ ಗೆ ಶಾಸಕರು ಗುಳೆ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಶಾಸಕರಾದ ನಂಜುಂಡಸ್ವಾಮಿ, ನಾಗರಾಜ್, ವೈ ಸಂಪಂಗಿ, ಸಾರ್ವಭೌಮ ಬಗಲಿ, ರಾಜು ಕಾಗೆ, ಶಿವನಗೌಡ ನಾಯಕ್, ಪಕ್ಷೇತರರಾದ ಗೂಳಿಹಟ್ಟಿ ಶೇಖರ್, ಶಿವರಾಜ್ ತಂಗಡಗಿ, ಡಿ ಸುಧಾಕರ್, ವೆಂಕಟರಮಣಪ್ಪ ಎಲ್ಲರೂ ಈ ಮುಂಚೆ ಬಿಜೆಪಿ ವಿರುದ್ಧ ಬಂಡಾಯಬ್ ಬಾವುಟ ಹಾರಿಸಿದ ಬಾಲಚಂದ್ರ ಜಾರಕಿಹೊಳಿ ಹಾಗೂ ಆನಂದ್ ಆಸ್ನೋಟಿಕರ್ ಅವರ ತಂಡದಲ್ಲಿ ಮೊದಲಿಂದಲೂ ಇದ್ದವರು ಎಂಬುದು ಗಮನಾರ್ಹ.












Click it and Unblock the Notifications