ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕಿಗಳ ಸ್ವರ್ಗ ರಂಗನತಿಟ್ಟಿನಲ್ಲಿ ಕೃತಕ ನಡುಗಡ್ಡೆ

By Prasad
|
Google Oneindia Kannada News

Artificial island at Ranganathittu bird sanctuary
ಶ್ರೀರಂಗಪಟ್ಟಣ, ಜ. 7 : ಜುಳುಜುಳು ಹರಿವ ಕಾವೇರಿ ನದಿಯ ನಡುವಿನ ನಡುಗಡ್ಡೆಯಲ್ಲಿ ಮೊಟ್ಟೆಗಳನ್ನಿಟ್ಟು ಕಾವುಕೊಟ್ಟು ಮರಿಗಳೊಂದಿಗೆ ಚಟಪಟ ರೆಕ್ಕೆಗಳನ್ನು ಬಡಿಯುತ್ತ ನಲಿದಾಡುವ ದೇಶವಿದೇಶದಿಂದ ಬರುವ ನಾನಾ ಬಗೆಯ ಹಕ್ಕಿಗಳನ್ನು ನೋಡಲು ಹಕ್ಕಿಗಳ ಸ್ವರ್ಗ ರಂಗನತಿಟ್ಟು ಪಕ್ಷಿಧಾಮ ಬಾಬಾ ಎಂದು ಕರೆಯುತ್ತಿದೆ.

ಈ ಕಾರಣಕ್ಕಾಗಿ ಅರಣ್ಯ ಇಲಾಖೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಕೃತಕ ನಡುಗಡ್ಡೆಯನ್ನು ನಿರ್ಮಿಸಿದ್ದು, ವಿಶಿಷ್ಟಬಗೆಯ ಹಕ್ಕಿಗಳಿಗೆ ಆಹ್ವಾನ ಪತ್ರಿಕೆಯನ್ನು ರವಾನಿಸಿವೆ. ಪಕ್ಷಿಧಾಮದ ಪಶ್ಚಿಮ ಭಾಗದಲ್ಲಿ ನಿರ್ಮಾಣವಾಗಿರುವ ನಡುಗಡ್ಡೆಯಲ್ಲಿ ನೀರಂಜಿ, ಹೊಂಗೆ ಮುಂತಾದ ಮರಗಳನ್ನು ನೆಡಲಾಗಿದೆ.

ಹಾವೇರಿಯ ಗೋದಾವಿ ಪಕ್ಷಿಧಾಮ ಮತ್ತು ಶಿವಮೊಗ್ಗದ ಮಂಡಗದ್ದೆ ಪಕ್ಷಿಧಾಮದಿಂದ ಹಕ್ಕಿಗಳು ಇಲ್ಲಿಗೆ ಬಂದು ವಂಶಾಭಿವೃದ್ಧಿಯಲ್ಲಿ ತೊಡಗುತ್ತವೆ. ಪ್ರಸ್ತುತ, ಪೆಲಿಕನ್, ನೈಟ್ ಹೆರಾನ್ಸ್, ಪೇಂಟೆಡೇ ಸ್ಟಾಕ್, ಓಪನ್ ಬಿಲ್ ಸ್ಟಾಕ್ಸ್, ಗ್ರೇ ಹೆರಾನ್ ಇನ್ನೂ ಮುಂತಾದ ವಿಭಿನ್ನ ಬಗೆಯ ಹಕ್ಕಿಗಳು ಇಲ್ಲಿ ಈಗಾಗಲೆ ಬಂದು ಪಕ್ಷಿ ವೀಕ್ಷಕರನ್ನು ಸೆಳೆಯುತ್ತಿವೆ.

ಹೋಗುವುದು ಹೇಗೆ? : ರಂಗನತಿಟ್ಟು ಪಕ್ಷಿಧಾಮ ಬೆಂಗಳೂರಿನಿಂದ 120 ಕಿ.ಮೀ. ಮತ್ತು ಮೈಸೂರಿನಿಂದ ಕೇವಲ 19 ಕಿ.ಮೀ. ದೂರದಲ್ಲಿದ್ದು, ಶ್ರೀರಂಗಪಟ್ಟಣದ ಬಳಿಯಿದೆ. ಖಾಸಗಿ ವಾಹನದಲ್ಲಿ ಬೆಂಗಳೂರಿನಿಂದ ಹೊರಟರೆ ಶ್ರೀರಂಗಪಟ್ಟಣ ದಾಟಿದ ಬಳಿಕ 3 ಕಿ.ಮೀ. ಸಾಗಿ ಬಲಕ್ಕೆ ತಿರುವು ತೆಗೆದುಕೊಂಡರೆ ಐದು ನಿಮಿಷದಲ್ಲಿ ಅಲ್ಲಿರಬಹುದು. ರಾಜ್ಯ ಸಾರಿಗೆ ಬಸ್ ಸೌಕರ್ಯವೂ ಇದೆ.

English summary
Karnataka Forast department has built artificial island at Ranganathittu bird sanctuary to facilitate the birds coming from all parts of the world. Birds like Pelican, Painted Stork, Night Herons have already come to the sanctuary for reproduction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X