ಲೋಕಪೀಠ: ನ್ಯಾ ಬನ್ನೂರುಮಠರ ನೇಮಕಕ್ಕೇ ಅಸ್ತು ಅನ್ನಿ
ಬೆಂಗಳೂರು,
ಜ. 5: ರಾಜ್ಯದ ಲೋಕಾಯುಕ್ತರನ್ನಾಗಿ ನ್ಯಾ ಎಸ್ಆರ್ ಬನ್ನೂರುಮಠರ ನೇಮಕಕ್ಕೆ ಯಾವುದೇ ಕಾರಣಕ್ಕೂ ಅಂಗೀಕಾರ ನೀಡುವುದಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪುನರುಚ್ಚರಿಸಿದ್ದಾರೆ. ಆದರೆ, ಎಂದಿನಂತೆ ಮುಖ್ಯಮಂತ್ರಿ ಸದಾನಂದ ಗೌಡರೂ ಬಿಲ್ಕುಲ್ ಆ ಹೆಸರನ್ನು ವಾಪಸ್ ತಗೋಳೊಕ್ಕೆ ಆಗೊಲ್ಲ. ನ್ಯಾ ಬನ್ನೂರುಮಠರ ನೇಮಕಕ್ಕೇ ಅಸ್ತು ಅನ್ನಿ ಎಂದು ವೈಕುಂಠ ಏಕಾದಶಿ ದಿನದಂದೂ ಹಠ ಹಿಡಿದಿದ್ದಾರೆ. id="toptextpromo">'ಬನ್ನೂರುಮಠ
ಒಬ್ಬ ಉತ್ತಮ ನ್ಯಾಯಾಧೀಶರಿರಬಹುದು. ಆದರೆ ಆವರ ಮೇಲೆ ಅನೇಕ ಆರೋಪಗಳಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಲೋಕಾಯುಕ್ತರನ್ನಾಗಿ ಅವರನ್ನು ನೇಮಕ ಮಾಡಲು ತನ್ನ ಒಪ್ಪಿಗೆ ಇಲ್ಲ. ಹೊಸ ಹೆಸರನ್ನು ಸೂಚಿಸಿ' ಎಂದು ಭಾರದ್ವಾಜ್ ಖಡಾಖಂಡಿತವಾಗಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಸರಕಾರ
ಕಳಂಕ ರಹಿತ ವ್ಯಕ್ತಿಯನ್ನು ಸೂಚಿಸುವ ತನಕ ಸಹಿ ಮಾಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಆದರೂ ರಾಜಕೀಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು, ಅನಗತ್ಯವಾಗಿ ಬನ್ನೂರು ಮಠ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಕ ವಾಡಲು ಅನುಮೋದನೆ ಸೂಚಿಸಬೇಕೆಂದು ಪದೇಪದೇ ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ಲೋಕಾಯುಕ್ತ ಸ್ಥಾನಕ್ಕೆ ವೈಯಕ್ತಿಕ ಹಾಗೂ ವೃತ್ತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡ ಚಾರಿತ್ರವುಳ್ಳ ಯಾರನ್ನಾದರೂ ಸೂಚಿಸಿದರೆ ತಾವು ಒಪ್ಪಿಗೆ ನೀಡುವುದಾಗಿ' ಅವರು ಸ್ಪಷ್ಟಪಡಿಸಿದರು.











Click it and Unblock the Notifications