ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ಮಾಹಿತಿ :ಸಂತೋಷ್ ಹೆಗ್ಡೆಗೆ ಹೈಕೋರ್ಟ್ ನೋಟಿಸ್

|
Google Oneindia Kannada News

ಬೆಂಗಳೂರು, ಡಿ 5: ಸುಳ್ಳು ಮಾಹಿತಿ ನೀಡಿದ ದೂರು ಬಂದ ಹಿನ್ನಲೆಯಲ್ಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆಗೆ ರಾಜ್ಯ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ತನ್ನ ವಿರುದ್ದ ತಪ್ಪು ಮಾಹಿತಿ ನೀಡಿದ್ದಾರೆಂದು ಐಪಿಎಸ್ ಅಧಿಕಾರಿಯೊಬ್ಬರು ದೂರು ನೀಡಿದ ಹಿನ್ನಲೆಯಲ್ಲಿ ಕೋರ್ಟ್ ನೋಟೀಸ್ ಜಾರಿ ಮಾಡಿದೆ.

ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ನಿವಾಸದ ಮೇಲೆ ಮಾರ್ಚ್ 2009 ರಂದು ಲೋಕಾಯುಕ್ತ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ನಿಂಬಾಳ್ಕರ್ 250 ಕೋಟಿ ರೂಪಾಯಿ ಅಕ್ರಮ ಆಸ್ತಿ ಹೊಂದಿದ್ದಾರೆಂದು ಸಂತೋಷ್ ಹೆಗ್ಡೆ ಹೇಳಿಕೆ ನೀಡಿದ್ದರು.

ಆನಂತರ ನಿಂಬಾಳ್ಕರ್ ಆಸ್ತಿ ಪರಿಶೀಲಿಸಿದ ನಂತರ 250 ಕೋಟಿ ಅಲ್ಲ, 76 ಲಕ್ಷ ಎಂದು ಹೆಗ್ಡೆ ಹೇಳಿಕೆ ನೀಡಿದ್ದರು. ಅನಾವಶ್ಯಕವಾಗಿ ನನ್ನ ತೇಜೋವಧೆ ಮಾಡಲು ಹೆಗ್ಡೆ ಈ ರೀತಿ ಹೇಳಿಕೆ ನೀಡಿದ್ದರು ಎಂದು ನಿಂಬಾಳ್ಕರ್ ಹೆಗ್ಡೆ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಆದರೆ ಹೈಕೋರ್ಟ್ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ತಿರಸ್ಕರಿಸಿತ್ತು. ನಿಂಬಾಳ್ಕರ್ ಮತ್ತೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಏಕಸದಸ್ಯ ಪೀಠ ಬುಧವಾರ ( ಡಿ 4) ಸಂತೋಷ್ ಹೆಗಡೆಗೆ ನೋಟೀಸ್ ಜಾರಿ ಮಾಡಿದೆ.

English summary
Karnataka High Court issued notice to former Lokayukta Santosh Hegde in connection with an appeal filed by a senior IPS officer Hemanth Nimbalkar challenging a lower court order dismissing his defamation suit against the former Supreme Court judge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X