ಜುಲೈನಲ್ಲಿ 2,000 ಕಿಂಗ್ ಫಿಷರ್ ನೌಕರರು ಮನೆಗೆ !

ವಿಷಯ ಏನಪಾ ಅಂತಂದರೆ, ಆರ್ಥಿಕವಾಗಿ ಬಾನಿನಿಂದ ಕುಸಿದು ಬಿದ್ದಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಇನ್ನಾರು ತಿಂಗಳಲ್ಲಿ 2,000 ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಿದೆ. ಇದೇ ವೇಳೆ ಉಳಿಯುವ ಸಿಬ್ಬಂದಿ ಕೈಯಲ್ಲಿ ಹೆಚ್ಚಿನ ಅವಧಿಗೆ ಕೆಲಸ ಮಾಡಿಸಲೂ ಆಲೋಚಿಸುತ್ತಿದೆ.
ತನ್ನ ಕಾರ್ಪೊರೇಟ್ ಕಚೇರಿಗಳಲ್ಲಿ ಮಧ್ಯಮ ಹಂತದ ಮ್ಯಾನೇಜ್ಮೆಂಟ್, ವಿಮಾನ ಸಿಬ್ಬಂದಿ ಮತ್ತಿತರ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಗಮನಾರ್ಹವೆಂದರೆ ಆಗಸ್ಟ್ ವರೆಗೂ ಹೊಸ ನೇಮಕಗಳನ್ನೂ ಮಾಡಿಕೊಳ್ಳುವ ಆಲೋಚನೆ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಇಲ್ಲವಾಗಿದೆ.
ಹಿಂದಿನ ಆರ್ಥಿಕ ವರ್ಷದಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ತನ್ನ ಸಿಬ್ಬಂದಿಗೆ 676 ಕೋಟಿ ರುಪಾಯಿ ಸಂಬಳ ನೀಡಿತ್ತು. ಈ ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದು ಸಂಸ್ಥೆಯ ಇರಾದೆಯಾಗಿದೆ. ಅಂದಹಾಗೆ, 2011ರ ಮಾರ್ಚ್ ನಲ್ಲಿ ಸಂಸ್ಥೆಯಲ್ಲಿದ್ದ ಉದ್ಯೋಗಿಗಳ ಸಂಖ್ಯೆ 7,317.












Click it and Unblock the Notifications