10 ವರ್ಷ ಹುಡುಗಿ ಮೇಲೆ 82 ರ ವೃದ್ಧನಿಂದ ರೇಪ್

ಅಕ್ಟೋಬರ್ 14,2009ರಲ್ಲಿ ಕುಲಕರ್ಣಿ ಅವರ ಬಂಗಲೆಯಲ್ಲಿ 10 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಪ್ರಾಥಮಿಕ ಹಂತದಲ್ಲಿ ಮೃತಳ ತಾಯಿ, ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದಳು. ಆದರೆ, ತನಿಖೆ ನಂತರ ಮೃತ ಬಾಲಕಿಯ ತಾಯಿ ರೇಖಾ ಹಾಗೂ ಕುಲಕರ್ಣಿಗೂ ಅಕ್ರಮ ಸಂಬಂಧ ಇರುವುದು ತಿಳಿದು ಬಂದಿತ್ತು.
ಮಗಳ ಹತ್ಯೆಯನ್ನ ಯಾರಿಗೂ ಹೇಳದಿದ್ದರೆ 50,000 ರೂ ನೀಡುವೆ. ನಿನ್ನ ಚೆನ್ನಾಗಿ ನೋಡಿಕೊಳ್ಳುವೆ ಎಂದು ರೇಖಾಳಿಗೆ ಕುಲಕರ್ಣಿ ಆಸೆ ತೋರಿಸಿದ್ದ. ಆದರೆ, ವಿಚಾರಣೆ ವೇಳೆ ಪೊಲೀಸರ ಕಿರುಕುಳ ತಾಳಲಾರದೆ ರೇಖಾ ಎಲ್ಲಾ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ.
ರೇಖಾ ನೀಡಿದ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿ,ಕುಲಕರ್ಣಿ ಹಾಗೂ ರೇಖಾಳನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದರು.
ಐಪಿಸಿ ಸೆಕ್ಷನ್ 302,201 ಹಾಗೂ 376(2)(12 ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ) ಅಡಿಯಲ್ಲಿ ಕುಲಕರ್ಣಿಗೆ ಶಿಕ್ಷೆ ಪ್ರಾಪ್ತಿಯಾಗಲಿದೆ. ಶಿಕ್ಷೆ ಪ್ರಮಾಣ ಇನ್ನೂ ಪ್ರಕಟವಾಗಿಲ್ಲ.












Click it and Unblock the Notifications