ಮೊಬೈಲಿನಂತೆ ಬ್ಯಾಂಕ್ ಖಾತೆ ಪೋರ್ಟೆಬಿಲಿಟಿಯೂ ಸಾಧ್ಯ

ಈ ಸೇವೆ ಜಾರಿಯಾದಲ್ಲಿ, ಬ್ಯಾಂಕ್ ಖಾತೆದಾರನು ತನ್ನ ಬ್ಯಾಂಕ್‌ನ್ನು ಬದಲಾಯಿಸಿದರೂ, ತನ್ನ ಮೂಲ ಖಾತೆಯ ಸಂಖ್ಯೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಗಮನಾರ್ಹವೆಂದರೆ ಇಡೀ ಜಗತ್ತಿನಲ್ಲಿ ಆಮೂಲಾಗ್ರವಾಗಿ ಬ್ಯಾಂಕ್ ಖಾತೆ ಸಂಖ್ಯೆಗಳ ಪೋರ್ಟೆಬಿಲಿಟಿ ಸೇವೆ ಎಲ್ಲೂ ಇಲ್ಲ. ಸ್ವೀಡನ್ ನಲ್ಲಿ ಮಾತ್ರ ಇದು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ.
'ಉಳಿತಾಯ ಖಾತೆ ಸಂಖ್ಯೆಗಳ ಪೋರ್ಟೆಬಿಲಿಟಿ ವ್ಯವಸ್ಥೆ ಜಾರಿಗೊಳಿಸಲು ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ. KYC ಮತ್ತು ಕೋರ್ ಬ್ಯಾಂಕಿಂಗ್ ಸೊಲ್ಯುಶನ್ಸ್ (CBS) ವ್ಯವಸ್ಥೆಯಡಿ ಅವುಗಳನ್ನು ಗುರುತಿಸಿದ್ದೇವೆ. ಶೀಘ್ರದಲ್ಲೇ ಅವುಗಳನ್ನು ನಿವಾರಿಸಿಕೊಳ್ಳಲಿದ್ದೇವೆ' ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ಡಿ.ಕೆ. ಮಿತ್ತಲ್ ಹೇಳಿದ್ದಾರೆ.
ಈ ಸೌಲಭ್ಯದಿಂದಾಗಿ ಗ್ರಾಹಕರು ಪದೇ ಪದೇ ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ ಪ್ರಕ್ರಿಯೆಗೆ ಗುರಿಯಾಗದೆ ಬ್ಯಾಂಕ್‌ಗಳನ್ನು ಬದಲಾಯಿಸಿಕೊಳ್ಳುವ ಅವಕಾಶ ಸಿಗುತ್ತದೆ.












Click it and Unblock the Notifications