ಯಡಿಯೂರಪ್ಪ ಅವರು ದೆಹಲಿಗೆ ವರ್ಗವಾಗಲಿದ್ದಾರೆ

CP Yogeshwar and Yeddyurappa
ಬೆಂಗಳೂರು, ಜ.3: ಯಡಿಯೂರಪ್ಪ ಅವರು ದೆಹಲಿಗೆ ವರ್ಗವಾಗಲಿದ್ದಾರೆ. ರಾಷ್ಟ್ರೀಯ ನಾಯಕರಾಗಿ ತಮ್ಮ ರಾಜಕೀಯ ಜೀವನ ಮುಂದುವರೆಸಲಿದ್ದಾರೆ. ರಾಜ್ಯದ ಬಿಜೆಪಿ ಬಿಕ್ಕಟ್ಟು ಶೀಘ್ರದಲ್ಲೇ ಶಮನಗೊಳ್ಳಲಿದೆ ಎಂದು ಅರಣ್ಯ ಸಚಿವ ಸಿಪಿ ಯೋಗೀಶ್ವರ್ ಹೇಳಿದರು.

ಯಡ್ಡಿ ಬಣ ಸಂಕ್ರಾಂತಿ ಡೆಡ್ ಲೈನ್ ನೀಡಿದ ಹಿನ್ನೆಲೆಯಲ್ಲಿ ಆರ್ ಅಶೋಕ್ ನೇತೃತ್ವದಲ್ಲಿ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಪಕ್ಷದಿಂದ ಶಾಸಕರ ಪಲಾಯನ ತಪ್ಪಿಸಲು ಅಶೋಕ್ ಯತ್ನಿಸಿದ್ದು, 10 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಯಡಿಯೂರಪ್ಪ ಅವರು ಪಕ್ಷ ತೊರೆಯುವ ಸಂದರ್ಭ ಬಂದರೆ ಉದ್ಭವಿಸಬಹುದಾದ ತೊಂದರೆಗಳ ಬಗ್ಗೆ ಚರ್ಚೆ ನಡೆದಿದೆ.

ಯಡಿಯೂರಪ್ಪ ಅವರು ಪಕ್ಷ ಬಿಡಬಾರದು, ಸದಾನಂದ ಗೌಡರ ಸರ್ಕಾರ ಉಳಿಸಬೇಕು ಎಂದು ಶಾಸಕರು ಒಕ್ಕೊರಲ ಮನವಿ ಮಾಡಿದ್ದಾರೆ.

ಹೈಕಮಾಂಡ್ ಗೆ ಯಾರೂ ಡೆಡ್ ಲೈನ್ ವಿಧಿಸಲು ಸಾಧ್ಯವಿಲ್ಲ ಎಂಬ ಸದಾನಂದ ಗೌಡರ ಮಾತಿಗೆ ಯಡಿಯೂರಪ್ಪ ಅವರು ಕೊಂಚ ಸಿಟ್ಟಾದಂತೆ ತೋರಿದೆ. ಆದರೆ, ಯಡಿಯೂರಪ್ಪ ಅವರಿಗೆ ದೆಹಲಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿ ರಾಜ್ಯ ರಾಜಕಾರಣದಿಂದ ದೂರ ಇಡುವ ಯೋಜನೆಗೆ ಯಡ್ಡಿ ಬಣ ಮನಸ್ಸಿಲ್ಲದ ಮನಸ್ಸಿನಿಂದ ಓಕೆ ಎಂದಿದೆ ಎಂಬ ಸುದ್ದಿಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+