ಅತ್ಯಾಚಾರಕ್ಕೆ ಯತ್ನಿಸಿದ ವಿದೇಶಿಯರಿಗೆ ಥಳಿತ
ತೂತುಕುಡಿ,
ಜ.2: ವಿದೇಶಿ ಮಹಿಳೆಯರ ಮೇಲೆ ಸ್ಥಳೀಯರು ಅತ್ಯಾಚಾರ ಮಾಡುವ ಸುದ್ದಿ ಆಗಿಂದಾಗೆ ಕೇಳಿಬರುತ್ತಿವೆ. ಆದರೆ ಸ್ಥಳೀಯ ಮಹಿಳೆ ಮೇಲೆ ವಿದೇಶಿ ಪುರುಷರು ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪಾಲಾಯಂಕೊಟ್ಟಾಯಿ ಎಂಬಲ್ಲಿ ನಡೆದಿದೆ. id="toptextpromo">ಕಾರ್ಗೋ
ಹಡಗಿನಲ್ಲಿ ನಾವಿಕರಾಗಿರುವ ಅಮೆರಿಕದ ರಸ್ಲೆ ಫ್ರಾನ್ಸಿಸ್ ಮತ್ತು ಜಾನ್ ಡೋಗಲ್ಸ್ ಎಂಬುವರು ಪಾಲಾಯಂಕೊಟ್ಟಾಯಿಯಲ್ಲಿ ಹೊಸವರ್ಷದ ಆಚರಣೆಯ ಸಂದರ್ಭದಲ್ಲಿ ಪಾನಮತ್ತರಾಗಿ ಅಲ್ಲಿಯೆ ಇದ್ದ ಮಹಿಳೆಯನ್ನು ಶುಭ ಕೋರುವಂತೆ ಕೈಕುಲುಕಿ ನಂತರ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದರು. ಇವರ ಈ ಕೆಟ್ಟ ವರ್ತನೆಯಿಂದ ಭಯಪಟ್ಟ ಮಹಿಳೆ ಓಡಲಾರಂಭಿಸಿದಳು. id='are-slot-1' class='oiad oi-axt oiadv'> id='top-searched-articles'> ವಿದೇಶಿಯರ ಈ ಅಟ್ಟಹಾಸವನ್ನು ನೋಡಿ ರೊಚ್ಚಿಗೆದ್ದ ಸ್ಥಳೀಯರು ಚೆನ್ನಾಗಿ ಥಳಿಸಿ ಸಮೀಪದಲ್ಲಿರುವ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜನರ ಏಟಿನಿಂದಾಗಿ ತೀವ್ರ ಗಾಯಗೊಂಡಿದ್ದ ಆರೋಪಿಗಳನ್ನು ಪೊಲೀಸರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.











Click it and Unblock the Notifications