ಬೆಂಗಳೂರಿನಲ್ಲಿ ಅಗ್ನಿ ದುರಂತ : 7 ಖಾಸಗಿ ಬಸ್ಸುಗಳು ಭಸ್ಮ

ಬೆಂಗಳೂರು, ಜ. 2 : ಖಾಸಗಿ ಟ್ರಾವೆಲ್ಸ್‌ಗೆ ಸೇರಿದ ಕನಿಷ್ಠ 7 ಬಸ್ಸುಗಳು ಅಗ್ನಿ ಆಕಸ್ಮಿಕಕ್ಕೆ ಆಹುತಿಯಾದ ಘಟನೆ ಬೆಂಗಳೂರಿನ ರಿಂಗ್ ರಸ್ತೆಯಲ್ಲಿರುವ ಪಿಇಎಸ್ಐಟಿ ಕಾಲೇಜಿನ ಬಳಿಯಿರುವ ವಾಹನಗಳನ್ನು ನಿಲ್ಲಿಸುವ ತಾಣದಲ್ಲಿ ಸೋಮವಾರ ನಡೆದಿದೆ.

ನಾಯಂಡಹಳ್ಳಿ ಬಳಿ ಇರುವ ಗ್ಯಾರೇಜೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಒಂದು ವಾಹನಕ್ಕೆ ತಗುಲಿಕೊಂಡ ಬೆಂಕಿ ಇತರ ವಾಹನಗಳಿಗೂ ವ್ಯಾಪಿಸಿದೆ. ಕನಿಷ್ಠ 7 ವಾಹನಗಳು ಅಗ್ನಿಗೆ ಆಹುತಿಯಾಗಿವೆ ಎಂಬ ಮಾಹಿತಿ ಬಂದಿದೆ.

ರಿಂಗ್ ರಸ್ತೆಯಿಂದ ಆವಲಹಳ್ಳಿಗೆ ಹೋಗುವ ರಸ್ತೆಯಲ್ಲಿ ವೀರಭದ್ರ ನಗರದಲ್ಲಿ ಈ ದುರಂತ ಸಂಭವಿಸಿದೆ. ಹಬ್ಬಿಕೊಳ್ಳುತ್ತಿರುವ ಅಗ್ನಿ ಶಮನಕ್ಕೆಂದು 6 ಅಗ್ನಿಶಾಮಕ ದಳದ ವಾಹನಗಳು ಧಾವಿಸಿದ್ದು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+