ಹೊಸವರ್ಷ ಸಂಭ್ರಮದಲ್ಲಿ ಡ್ರಗ್ ಬಳಕೆ ಅತಿ ಹೆಚ್ಚು

ಅತ್ಯಂತ ಸುಲಭವಾಗಿ ಮಾದಕ ಪದಾರ್ಥಗಳು ಸಿಗುತ್ತಿರುವುದು, ಯಶಸ್ಸು ಸಾಧಿಸಬೇಕೆಂಬ ಒತ್ತಡ, ಮಾನಸಿಕ ಕ್ಲೇಷಗಳು ಇಂದಿನ ಯುವ ಜನತೆಯನ್ನು ಡ್ರಗ್ ತೆಗೆದುಕೊಳ್ಳಲು ಪ್ರೇರೇಪಿಸುತ್ತಿವೆ. 16ರಿಂದ 30 ವರ್ಷದ ಯುವಕರು ಹೆಚ್ಚಾಗಿ ಈ ಪಿಡುಗಿಗೆ ಬಲಿಯಾಗುತ್ತಿದ್ದಾರೆ.
ಅಸ್ಸೋಚಾಮ್ ಸಾಮಾಜಿಕ ಅಭಿವೃದ್ಧಿ ಫೌಂಡೇಷನ್ ಬೆಂಗಳೂರು, ಪುಣೆ, ಗೋವಾ, ಮುಂಬೈ, ಅಹ್ಮದಾಬಾದ್, ಮುಂಬೈ, ದೆಹಲಿ, ಚಂಡಿಗಢ, ಚೆನ್ನೈ ಮುಂತಾದ ನಗರಗಳಲ್ಲಿ ಸಮೀಕ್ಷೆ ಕೈಗೊಂಡಿತ್ತು. ಉಳಿದ ಸಂದರ್ಭದಲ್ಲಿ ಕೇವಲ 50 ರು.ಗೆ ಮಾದಕ ವಸ್ತು ಸಿಗುತ್ತಿದೆ. ವರ್ಷಾಂತ್ಯದಲ್ಲಿ ಬೆಲೆಗಳು ಏರುಮುಖವಾಗುತ್ತವೆ.
ಸಮೀಕ್ಷೆಯ ಪ್ರಕಾರ, ಹೆಚ್ಚಿನವರು ಸ್ನೇಹಿತರು ತೆಗೆದುಕೊಳ್ಳುತ್ತಾರೆಂದು ತಾವು ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಉಳಿದಂತೆ ಖಿನ್ನತೆಯಿಂದ ಹೊರಬರಲು ಮಾದಕ ವಸ್ತು ಸೇವನೆ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ವರ್ಷಾಂತ್ಯದ ಪಾರ್ಟಿಗಳಲ್ಲಿ ಇದರ ಬಳಕೆ ಅತಿ ಹೆಚ್ಚಾಗಿರುತ್ತದೆ ಎಂಬ ಅಂಶ ಬಹಿರಂಗವಾಗಿದೆ.
ಮಾದಕ ವಸ್ತು ಬಳಕೆಯನ್ನು ತಹಬದಿಗೆ ತರಲು ಹೊಸ ವರ್ಷಾಚರಣೆಯ ಸಂದರ್ಭ ಅತ್ಯಂತ ಸೂಕ್ತ. ಪೊಲೀಸರು ಅತ್ಯಂತ ಜಾಗೃತರಾಗಿ ಇದಕ್ಕೆ ಕಡಿವಾಣ ಹಾಕಬೇಕು ಮತ್ತು ವ್ಯಸನಕ್ಕೆ ಒಳಗಾದವರನ್ನು ಕೌನ್ಸೆಲಿಂಗ್ ಮುಖಾಂತರ ಸರಿದಾರಿಗೆ ತರಬಹುದಾಗಿದೆ. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಬೆಂಗಳೂರಿನಂಥ ನಗರಗಳಲ್ಲಿ ಹದಿಹರೆಯದ ಹುಡುಗಿಯರ ಸಂಖ್ಯೆಯೂ ಗಣನೀಯವಾಗಿದೆ.












Click it and Unblock the Notifications