ಅಂತಾರಾಷ್ಟ್ರೀಯ ಯೋಗ ಪ್ರದರ್ಶನಕ್ಕೆ ಹೇಮಮಾಲಿನಿ

ಸುಮಾರು 4 ಕೋಟೀ ವೆಚ್ಚದ ಈ ಪ್ರದರ್ಶನ ಮತ್ತು ಸಮಾವೇಶಕ್ಕೆ ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗ ಕೂಡಾ ಸಿಕ್ಕಿದೆ. ಕರ್ನಾಟಕ ಸರ್ಕಾರ ಸುಮಾರು 2 ಕೋಟಿ ರು ಹಾಗೂ ಕೇಂದ್ರ ಸರ್ಕಾರ 85 ಲಕ್ಷರೂ ನೀಡಿದ್ದು, ಉಳಿದಿದ್ದು ಪ್ರಾಯೋಜಕರಿಂದ ಪಡೆಯಲಾಗಿದೆ ಎಂದು ವೈದ್ಯಕೀಯ ಖಾತೆ ಸಚಿವ ಎಸ್ ಎ ರಾಮದಾಸ್ ಹೇಳಿದ್ದಾರೆ.
ಅಮೆರಿಕ, ಚೀನಾ, ಹಾಂಗ್ ಕಾಂಗ್, ಥೈಲ್ಯಾಂಡ್, ಮಲೇಶಿಯಾ, ಸಿಂಗಪುರ ದೇಶಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಸುಮಾರು 300 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿರುತ್ತದೆ.
ಸುಮಾರು 500ಕ್ಕೂ ಅಧಿಕ ಪ್ರತಿನಿಧಿಗಳು ತಮ್ಮ ವಾದ ಮಂಡಿಸಲಿದ್ದಾರೆ, ಯೋಗ ಹಾಗೂ ನ್ಯಾಚುರೋಪತಿ ಬಗ್ಗೆ ಉಪನ್ಯಾಸಗಳು ನಡೆಯಲಿದೆ. ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ನಟಿ, ರಾಜ್ಯ ಸಭಾ ಸದಸ್ಯೆ ಹೇಮಮಾಲಿನಿ ಸೇರಿದಂತೆ ಹಲವು ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications