ಅಮೆರಿಕದಿಂದ ಹಾರಿಬಂದ ಪುಣೆ ಟೆಕ್ಕಿಯ ಸೆರೆ

sexual-harassement-indian-techie-held-for-nude-photos
ಮುಂಬೈ, ಡಿ. 26: ಕ್ರಿಸ್ಮಸ್ ರಜೆಗಾಗಿ ಭಾರತಕ್ಕೆ ಬಂದಿಳಿದ 25 ವರ್ಷದ ಸವಾಪ್ನಿಲ್ ಬಲಿರಾಮ್ ಪತೋಲೆ ಎಂಬ ವಿದ್ಯಾರ್ಥಿಯನ್ನು ಶನಿವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ ಬಹಳ ಕಾಲದಿಂದ ಪೊಲೀಸರು ಪತೋಲೆ ತಲಾಶೆಯಲ್ಲಿದ್ದರು.

ಎರಡು ವರ್ಷಗಳ ಹಿಂದೆ ಪತೋಲೆ ಏನು ಮಾಡಿದ್ದ ಅಂದರೆ ತನ್ನ ಸಹಪಾಠಿಯ ನಗ್ನ ಚಿತ್ರಗಳನ್ನು ತೆಗೆದು, ತನ್ನೊಂದಿಗೆ ಸೆಕ್ಸ್ ಮಾಡುವಂತೆ ಬೆದರಿಕೆಯೊಡ್ಡಿದ್ದ. ಜತೆಗೆ, ಹಣ ಸುಲಿಗೆಗೂ ಮುಂದಾಗಿದ್ದ. ಈ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ಆಧರಿಸಿ ಪೊಲೀಸರು ಪತೋಲೆನನ್ನು ಈಗ ವಶಕ್ಕೆ ತೆಗೆದುಕೊಂಡಿದ್ದಾರೆ. ಪತೋಲೆ ಪ್ರಸ್ತುತ ಅಮೆರಿಕದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ.

ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ಪತೋಲೆ ಅಮೆರಿಕದಿಂದ ಆಗಮಿಸುತ್ತಿರುವ ಬಗ್ಗೆ ಮುಂಬೈನ ಸೈಬರ್ ಕ್ರೈಂ ವಿಭಾಗಕ್ಕೆ ಸುದ್ದಿ ಮುಟ್ಟಿಸಿದ್ದರು. 2009ರಲ್ಲಿ ಕೊಲ್ಹಾಪುರ ಐಐಟಿ ಕ್ಯಾಂಪಸ್ಸಿನಲ್ಲಿ ಇಬ್ಬರೂ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದಾಗ ಸಹಪಾಠಿಗಳಾಗಿದ್ದ ನಾವು ಮುಂದೆ ಗೆಳೆಯರಾದೆವು. ಒಂದು ಸಂದರ್ಭದಲ್ಲಿ ಆರೋಪಿ ನನ್ನ ನಗ್ನ ಚಿತ್ರಗಳನ್ನು ತೆಗೆದಿದ್ದ.

ಆ ಚಿತ್ರಗಳನ್ನು ತೋರಿಸಿ ನನ್ನನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ. ತನ್ನೊಂದಿಗೆ ಸೆಕ್ಸ್ ಮಾಡು ಎಂದೂ ಪೀಡಿಸುತ್ತಿದ್ದ. ಸಾಲದು ಅಂತ ಹಣ ಸುಲಿಗೆಗೂ ಮುಂದಾಗಿದ್ದ. ಇದರಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದೆ. ಈಗ ಅವನ ಬಂಧನವಾಗಿದೆ ಎಂದು ಪುಣೆ ಮೂಲದ ಬಾಧಿತ ಯುವತಿ ತಿಳಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+