ಬೆಂಗಳೂರು, ಡಿ.26: ಹೊಸ ವರ್ಷಾಚರಣೆ ಅಂಗವಾಗಿ 'ನಮ್ಮ ಮೆಟ್ರೊ' ರೈಲು ಗಾಡಿಗಳು ಡಿಸೆಂಬರ್ 31ರ ರಾತ್ರಿ 10ರಿಂದ ಜನವರಿ 1ರ ಬೆಳಗಿನ ಜಾವ 2ರವರೆಗೆ ಸಂಚರಿಸಲಿವೆ. ಈ ಅವಧಿಯಲ್ಲಿ ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ- ಎರಡೂ ಕಡೆಯಿಂದ ಪ್ರತಿ 15 ನಿಮಿಷಕ್ಕೊಮ್ಮೆ ಒಂದರಂತೆ ರೈಲುಗಳು ಓಡಾಡಲಿವೆ.
ಹೊಸ ವರ್ಷದ ದಿನವಲ್ಲದೇ ಇತರ ದಿನಗಳಂದು ರಾತ್ರಿ 10ರ ನಂತರವೂ ಮೆಟ್ರೊ ನಿಲ್ದಾಣಗಳಲ್ಲಿ ಜನರಿದ್ದರೆ ರೈಲು ಸಂಚಾರದ ಸಮಯವನ್ನು ಬೇಡಿಕೆಗೆ ಅನುಸಾರ ವಿಸ್ತರಣೆ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.