ಹುಡುಗನನ್ನು ಅತ್ಯಾಚಾರಕ್ಕೆ ಪ್ರೇರೇಪಿಸಿದ್ದು ನೀಲಿ ಚಿತ್ರ

ಲೈಂಗಿಕ ಚಿತ್ರಗಳನ್ನು ನೋಡಿನೋಡಿಯೇ ನಾನು ಅತ್ಯಾಚಾರ ಎಸಗಲು ಯತ್ನಿಸಿದೆ ಎಂದು ಮಗುವಿನ ಮೇಲೆ ಲೈಂಗಿಕವಾಗಿ ಮತ್ತು ದೈಹಿಕವಾಗಿ ಹಲ್ಲೆ ಮಾಡಿದ ಹುಡುಗ ನೆಲಮಂಗಲ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಆತನನ್ನು ಗುರುವಾರ ಹೊಸೂರು ರಸ್ತೆಯಲ್ಲಿರುವ ಬಾಲಾಪರಾಧಿಗಳ ಮನೆಗೆ ಕಳುಹಿಸಲಾಗಿದೆ.
ಅಪ್ರಾಪ್ತ ವಯಸ್ಕ ಆರೋಪಿ ನರ್ಸರಿಯಲ್ಲಿ ಓದುತ್ತಿರುವ ತನ್ನ ಸಹೋದರ ಸಂಬಂಧಿಯನ್ನೇ ಕಾಮತೃಷೆ ತೃಪ್ತಿಪಡಿಸಿಕೊಳ್ಳಲು ಯತ್ನಿಸಿದ್ದಾನೆ. ಮಗು ಚೀರಿಕೊಂಡಾಗ ಬಂಡೆಗೆ ತಲೆ ಘಟ್ಟಿಸಿ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಗುವಿನ ಸ್ಥಿತಿ ಗಂಭೀರವಾಗಿದೆ.
ಇಂಟರ್ನೆಟ್ ಈಗ ಪುಟಾಣಿ ಮಕ್ಕಳಿಗೂ ಎಟಕುತ್ತಿರುವುದರಿಂದ ನೀಲಿ ಚಿತ್ರಗಳನ್ನು ನೋಡುವುದು ಸರ್ವೇಸಾಮಾನ್ಯವಾಗುತ್ತಿದೆ. ಮಕ್ಕಳು ಅವನ್ನು ನೋಡಿ ಅಡ್ಡ ದಾರಿ ಹಿಡಿಯದಂತೆ ತಡೆಯುವ ಗುರುತರ ಜವಾಬ್ದಾರಿ ಶಾಲಾ ಶಿಕ್ಷಕರು ಮತ್ತು ಪಾಲಕರ ಮೇಲಿದೆ. ಒಂದು ಅಧ್ಯಯನದ ಪ್ರಕಾರ, ನೀಲಿಚಿತ್ರ ನೋಡುವ ಗೀಳಿಗೆ ಬೀಳುವ ಮಕ್ಕಳು ಪಾಠದಲ್ಲಿಯೂ ಹಿಂದೆ ಬೀಳುತ್ತಿವೆ.












Click it and Unblock the Notifications