ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ ಬೆಳ್ಳಿಗೆ ಹರುಷ ತರದ ಕ್ರಿಸ್ಮಸ್ ಮತ್ತು ಹೊಸವರುಷ

|
Google Oneindia Kannada News

Gold, silver flat ahead of Christmas and New Year
ಕ್ರಿಸ್ಮಸ್ ಮತ್ತು ಹೊಸ ವರುಷಕ್ಕೆ ಮುನ್ನ ಚಿನ್ನದ ಖರೀದಿ ಕಡಿಮೆಯಾಗಿರುವುದರಿಂದ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ನೀರಸ ವಹಿವಾಟು ದಾಖಲಿಸಿದೆ. ಆರಂಭಿಕ ವಹಿವಾಟಿನಲ್ಲಿ ದೇಶದ ಚಿನ್ನದ ಗತಿ ಏರಿಕೆ ದಾಖಲಿಸಿದರೂ ಮಧ್ಯಾಹ್ನದ ವೇಳೆಗೆ ನೀರಸ ಅಂತ್ಯಕಂಡಿದೆ.

ಕಮಾಡಿಟಿ ಮಾರುಕಟ್ಟೆಯಲ್ಲಿ(ಎಂಸಿಎಕ್ಸ್) ಫೆಬ್ರವರಿ ತಿಂಗಳ ಚಿನ್ನದ ಗುತ್ತಿಗೆ ಪೂರೈಕೆ ಸೂಚಿಯಲ್ಲಿ ಹತ್ತು ಗ್ರಾಂ ಚಿನ್ನದ ದರ 27,747 ರು.ಗೆ ವಹಿವಾಟು ಆರಂಭವಾಯಿತು. ಆದರೆ ಮಧ್ಯಾಹ್ನದ ವೇಳೆಗೆ ಯಾವುದೇ ಮಹತ್ವದ ಬದಲಾವಣೆಯಾಗದೇ ವಹಿವಾಟು ದರ 27,732 ರುಪಾಯಿ ಮತ್ತು 27,758 ರು. ನಡುವೆಯೇ ನೀರಸವಾಗಿ ವಹಿವಾಟು ಮುಗಿಸಿತು.

ಬೆಳ್ಳಿ ದರ ಕೂಡ ಇದೇ ಟ್ರೆಂಡ್ ಮುಂದುವರೆಸಿತು. ಮಾರ್ಚ್ ತಿಂಗಳ ಪೂರೈಕೆಗಾಗಿ ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ವಹಿವಾಟುನಲ್ಲಿಂದು ಬೆಳ್ಳಿದರ ಕೆ.ಜಿ.ಗೆ 53 ಸಾವಿರ ರು.ಗೆ ಆರಂಭವಾಗಿ 53.122 ರುನಿಂದ 53,128 ದರದ ನಡುವೆ ತೂಗುಯ್ಯಲೆಯಾಡಿ ನೀರಸ ವಹಿವಾಟು ನಡೆಸಿತು.

ವಿದೇಶಿ ಚಿನ್ನದ ವಹಿವಾಟು ಕೂಡ ಭಾರತದ ಟ್ರೆಂಡನ್ನೇ ಅನುಸರಿಸಿತು. ಅಮೆರಿಕದ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಔನ್ಸಿಗೆ 1,611 ಡಾಲರ್ ನಿಂದ 1.612 ಡಾಲರ್ ನಡುವೆ ಇತ್ತು. ಡಾಲರ್ ಕಡೆಯಿಂದ ಯಾವುದಾದರೂ ಒಳ್ಳೆಯ ವಿಷಯವಿದೆಯೇ ಎಂದು ನೋಡಿದರೆ ಡಾಲರ್ ಮೌಲ್ಯ ಕೂಡ ಕುಸಿದಿತ್ತು. ಯುರೋ ಮತ್ತು ರುಪಾಯಿ ಮೌಲ್ಯ ಡಾಲರ್ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ಯಾವುದೇ ಪ್ರಮುಖ ಸುದ್ದಿ ಬಾರದೇ ಇದ್ದದ್ದು ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರಿತ್ತು. ಡಾಲರ್ ಮತ್ತು ರೂಪಾಯಿ ಜುಗಲ್ ಬಂದಿಯಿಂದ ಲಾಭಪಡೆಯಲು ಹೂಡಿಕೆದಾರರು ವಿಫಲರಾದದ್ದು ಚಿನ್ನದ ನೀರಸ ವಹಿವಾಟಿಗೆ ಕಾರಣವಾಗಿದೆ.

English summary
Gold and silver witnessed a flat trend on Thursday as buying seems to be muted ahead of Christmas and New Year. India gold futures advanced little during initial trading hours, took a quick turnaround and was seen trading flat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X