ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದ ಗೌಡ ಜಯಭೇರಿ, ಸರ್ಕಾರ ಭದ್ರ

By Mahesh
|
Google Oneindia Kannada News

MLC Election 2011
ಬೆಂಗಳೂರು, ಡಿ.22: ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಗುರುವಾರ ನಡೆದಿರುವ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ, ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಭರ್ಜರಿ ಜಯಗಳಿಸಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿ ಸಂಭ್ರಮ ಮುಗಿಲು ಮುಟ್ಟಿದೆ.

ಒಟ್ಟು 225 ಸದಸ್ಯರ ಪೈಕಿ 119 ಬಿಜೆಪಿ ಶಾಸಕರು ಮತ ಚಲಾಯಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗಡ್ಡಿದೇವರ ಮಠ ಅವರಿಗೆ 69 ಮತಗಳು ಬಂದಿದ್ದು ಒಟ್ಟು 7 ಮತಗಳು ಅಸಿಂಧುವಾಗಿದೆ. ಡಿವಿ ಸದಾನಂದ ಗೌಡರು 123 ಮತ ಪಡೆದು ಭರ್ಜರಿ ಜಯ ಸಾಧಿಸಿದ್ದಾರೆ. ಜೆಡಿಎಸ್ ನ 26 ಶಾಸಕರು ಮತ ಚಲಾವಣೆ ಮಾಡಿಲ್ಲ.

ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಪಕ್ಷೇತರ ಶಾಸಕರ ಬೆಂಬಲ ಸಿಕ್ಕಿದ್ದು, ಪಕ್ಷೇತರ ಪೈಕಿ ಮೂವರು ಸರಿಯಾದ ಮತ ಹಾಗೂ ಉಳಿದವರು ಅಡ್ಡ ಮತ ಹಾಕಿರುವುದು ತಿಳಿದು ಬಂದಿದೆ.

ಕಾಂಗ್ರೆಸ್ ಪೈಕಿ 71 ಸದಸ್ಯರಲ್ಲಿ ಇಬ್ಬರ ಮತಗಳು ಅಸಿಂಧುವಾಗಿದೆ. ಕಾಂಗ್ರೆಸ್ ಗೆ ಕೈ ಕೊಟ್ಟು ತಕ್ಕಪಾಠ ಕಲಿಸಲು ಬಯಸಿದ ಜಾತ್ಯಾತೀತ ಜನತಾದಳ ತಟಸ್ಥ ನೀತಿ ಅನುಸರಿಸಿ ಸದಾನಂದಗೌಡರ ವಿಜಯಕ್ಕೆ ಪರೋಕ್ಷವಾಗಿ ತನ್ನ ಕಾಣಿಕೆ ನೀಡಿದೆ. ಈ ಮೂಲಕ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.

ಸಹಜವಾಗಿ ಎಲ್ಲಾ ಶಾಸಕರಿಗೆ ತಮ್ಮ ಗೆಲುವನ್ನು ಅರ್ಪಿಸಿದ ಸದಾನಂದ ಗೌಡರು, ಯಡಿಯೂರಪ್ಪ ಅವರ ಜೊತೆ ನಿಂತು ಎಂದಿನ ನಗು ಮುಖದಲ್ಲಿ ಪೋಸ್ ಕೊಟ್ಟರು. ಎಂಎಲ್ ಸಿ ಒಬ್ಬರು ಮುಖ್ಯಮಂತ್ರಿಯಾಗಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು.

English summary
Karnataka MLC Election : DV Sadananda Gowda becomes first CM to be chosen as MLC. He wins the battle against Congress candidare Ananda by huge margin. CM Sadananda Gowda gets 123 votes and Anand 63 votes out of 119 votes. Karnataka Assembly has strength of 225 members, 7 votes declared as invalid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X