ಯಲಹಂಕ ವಿಶ್ವನಾಥನ ರಾಜಕೀಯ ಗುರು ಯಾರು ಅಂದ್ಕೊಂಡ್ರಿ?

ಯಲಹಂಕ ಸುತ್ತಮುತ್ತ ಇವರ ಬೂಟಾಟಿಕೆಯ ಜನಪರ ಸೇವೆಗಳಿಗೆ ಸ್ವತಃ ಯಡಿಯೂರಪ್ಪನವರ ಕೃಪಾಶೀರ್ವಾದ ಇದೆ. HALನ ಈ ಮಾಜಿ ಟಿಕ್ನಿಷಿಯನ್ ರಾಕೆ ಟ್ ವೇಗದಲ್ಲಿ ಚಿಮ್ಮಲು ಸನ್ಮಾನ್ಯ ಯಡಿಯೂರಪ್ಪನವರೇ ಕಾರಣೀಭೂತ. ಕಳೆದ ದಶಕದಲ್ಲಿ ಎಸ್ಆರ್ ವಿಶ್ವನಾಥರ ಅಷ್ಟೂ ಅಕ್ರಮಗಳಿಗೆ ಯಡಿಯೂರಪ್ಪ ಅಸ್ತು ಅಂದಿದ್ದಾರೆ.
ಯಲಹಂಕ ಭಾಗದಲ್ಲಿ ವಿಶ್ವನಾಥ ನಡೆಸುವ ಯಾವುದೇ ರಾಜಕೀಯ ಸಮಾರಂಭವಿರಲಿ ಅದಕ್ಕೆ ಮುಖ್ಯಂತ್ರಿಯಾಗಿ ಯಡಿಯೂರಪ್ಪ ಖುದ್ದು ಹಾಜರಾಗಿ, ಅಧಿಕೃತ ಮುದ್ರೆ ಒತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಈ ಜೋಡಿ ಭರ್ಜರಿಯಾಗಿ ಮಿಂಚಿದೆ.
ಇಂತಿಪ್ಪ ವಿಶ್ವನಾಥ್ ಮೊನ್ನ ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದಕ್ಕೆ ಖುದ್ದು ಯಡಿಯೂರಪ್ಪನವರ ಪುತ್ರರು, ಕುಟುಂಬದವರು ಬಂದು ಆಶೀರ್ವದಿಸಿ ಹೋಗಿದ್ದಾರೆ. ಆದರೆ ಲೋಕಾಯುಕ್ತ ಪೊಲೀಸರು ಕಣ್ಣಂಚಿನಲ್ಲೇ ವಿಶ್ವನಾಥರ ಸಾಮರ್ಥ್ಯವನ್ನು ಅಳೆದುಕೊಂಡು ಹೋಗಿದ್ದರು.












Click it and Unblock the Notifications