ರಷ್ಯಾ ಸಂಸದೆ ಮತ್ತೆ ಪ್ಲೇಬಾಯ್ ಮುಖಪುಟಕ್ಕೆ

2 ವರ್ಷಗಳ ಹಿಂದೆಯೂ ಪೂರ್ಣ ಪ್ರಮಾಣದ ರಾಜಕಾರಣಿಯಾಗುವ ಮುನ್ನ ಇದೇ ರೀತಿ ಬೆತ್ತಲು ಬೆತ್ತಲು ಭಂಗಿಯಲ್ಲಿ ಇದೇ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸಿ, ಯುವಕರ ಕಣ್ಣುಕುಕ್ಕಿದ್ದಳು. ಕಾಲೇಜು ಶಿಕ್ಷಣ ಮುಗಿಸಿ, ಹೊರ ಜಗತ್ತಿಗೆ ಕಾಲಿಟ್ಟಿದ್ದ ಕೊಜೆವ್ನಿಕೊವಾಗೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಇದರಿಂದ ನೊಂದು, ವೃಥಾ ಸಮಯವೇಕೆ ಹಾಳು ಮಾಡುವುದು ಎಂದು ನಟನೆಗೆ ಇಳಿದಿದ್ದಳು, ಬಳಿಕ ಮಾಡೆಲ್ ಲೋಕದಲ್ಲಿ ವಿಹರಿಸಿದ್ದಳು. ಆಗ ಅವಳ ಬಾಯ್ ಫ್ರೆಂಡ್ ಕೈಕೊಟ್ಟಿದ್ದ ದುಃಖ ಸಹ ಅವಳನ್ನು ಆವರಿಸಿತ್ತು.
ಇದೆಲ್ಲದರಿಂದ ಸಾಕಷ್ಟು ದುಡ್ಡು, ಬಂಗಲೆ ಐಷಾರಾಮಿ ಜೀವನ ಕೈಗೂಡಿದೆ ಎಂಬ ಸಂತಸ ನನಗಿದೆ ಎಂದು ಯಾವುದೇ ಎಗ್ಗುಸಿಗ್ಗು ಇಲ್ಲದೆ ಕೊಜೆವ್ನಿಕೊವಾ ಹೇಳಿಕೊಂಡಿದ್ದಳು. ಬಳಿಕ ಅಧ್ಯಕ್ಷ ಪುಟಿನ್ ಸಮೀಪ ಸುಳಿದು ರಾಜಕಾರಣದಲ್ಲೂ ಒಂದು ಕೈ ನೋಡಿದಳು. ಈಗ ಮತ್ತೊಮ್ಮೆ ಮುಖ ಪುಟ ಒಳಪುಟಗಳಲ್ಲೆಲ್ಲ ತನ್ನ ದೇಹಸಿರಿಯನ್ನು ತೆರೆದಿಟ್ಟು ಕಚಗುಳಿಯಿಟ್ಟಿದ್ದಾಳೆ.
ಅಂದಹಾಗೆ, ಈಕೆ ಐಸ್ ಹಾಕಿಯಲ್ಲಿ ಒಲಿಂಪಿಕ್ ಚಾಂಪಿಯನ್ ಆಗಿದ್ದ ಅಲೆಕ್ಸಾಂಡರ್ ಕೊಜೆವ್ನಿಕೊವಾ ಅವರ ಪುತ್ರಿ.












Click it and Unblock the Notifications