ಮಕ್ಕಳ ಭವಿಷ್ಯಕ್ಕಾಗಿ ಹೆಂಡತಿ ತಲೆ ಹೊಡೆದ ಪತಿ

ಶಿವಲಾಯ್ ಅಪಾರ್ಟ್ಮೆಂಟ್ ನ ನಿವಾಸಿಯಾದ 37 ವರ್ಷದ ಸುನಿತಾ ಜಾಂಗಿರ್ ಅವರು ಮಹೇಶ್ ಅವರನ್ನು ಮದುವೆಯಾಗಿ 18 ವರ್ಷಗಳಾಗಿತ್ತು. ಇಬ್ಬರನ್ನು ಆಗಾಗ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಮಕ್ಕಳ ಭವಿಷ್ಯದ ಬಗ್ಗೆ ಜಗಳ ಕೊಂಚ ಜೋರಾಗಿ ನಡೆದಿತ್ತು. ನಿತ್ಯ ಜಗಳ ವಿಕೋಪಕ್ಕೆ ತಿರುಗಿ ಸುನಿತಾ ತವರು ಮನೆ ಸೇರಿದ್ದಳು. ಆದರೆ, ಪತಿ ಮಹೇಸ್ ಆಕೆಯ ಮನವೊಲಿಸಿ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದ.
ಕಾಲೇಜು ಹಾಗೂ ಶಾಲೆಗೆ ಹೋಗುವ ಇಬ್ಬರು ಮಕ್ಕಳು ಹೊಂದಿರುವ ದಂಪತಿ ಮಕ್ಕಳು ಇಲ್ಲದ ವೇಳೆಯಲ್ಲಿ ಜಗಳ ಆರಂಭಿಸಿದ್ದಾರೆ. ಪತ್ನಿ ಮಾತಿಗೆ ಸಿಟ್ಟಿಗೆದ್ದ ಪತಿ ಸುತ್ತಿಗೆ ಎತ್ತಿಕೊಂಡು ಆಕೆ ತಲೆಗೆ ಮತ್ತೆ ಮತ್ತೆ ಬಾರಿಸಿದ್ದಾನೆ.
ರಕ್ತಮಯವಾಗಿದ್ದ ತಲೆ ಹಿಡಿದುಕೊಂಡು ಪ್ರಜ್ಞೆ ತಪ್ಪಿ ಬಿದ್ದ ಸುನಿತಾ ಕಂಡು ಗಾಬರಿಗೊಂಡ ಮಹೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ನೆರ ಮನೆಯವರು ಸುನಿತಾಳನ್ನು ಸಮೀಪದ ವಿಎಸ್ ಆಸ್ಪತ್ರೆಗೆ ಸೇರಿಸಿ ಉಳಿಸಿಕೊಳ್ಳಲು ಯತ್ನಿಸಿದ್ದು, ವಿಫಲವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಪತಿಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications