ಈ ವೆಬ್ ಸೈಟ್ ಹುಡುಗಿಯರಿಗೆ ಮಾತ್ರ

Luluvsive.com ಎಂಬ ವೆಬ್ ತಾಣ ಡಿ.17 ರಂದು ಇಂಟರ್ ನೆಟ್ ಜಗತ್ತು ಪ್ರವೇಶಿಸಿದ್ದು, 'Sex And The City marries Facebook' ಎಂಬ ಅರ್ಥಗರ್ಭಿತ ಘಷಾ ವಾಕ್ಯವನ್ನು ಹಾಕಲಾಗಿದೆ.
ವೆಬ್ ತಾಣ ಆರಂಭವಾದ ಕೆಲ ಕಾಲದಲ್ಲೇ ಸುಮಾರು 1000ಕ್ಕೂ ಅಧಿಕ ಹುಡುಗರು ವೆಬ್ ಗೆ ಪ್ರವೇಶಿಸಲು ಅನುಮತಿ ಕೋರಿ ಪತ್ರಿಸಿದ್ದಾರೆ. ಆದರೆ, ಹುಡುಗರಿಗೆ ಪ್ರವೇಸ ನಿರಾಕರಿಸಲಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಫೇಸ್ ಬುಕ್ ಖಾತೆ ವಿವರದೊಂದಿಗೆ ಈ ವೆಬ್ ತಾಣಕ್ಕೆ ಲಾಗ್ ಇನ್ ಆಗಬಹುದು. ಆದರೆ, ಅತ್ಯಂತ ಸುರಕ್ಷಿತ ಹಾಗೂ ಖಾಸಗಿ ಸಾಮಾಜಿಕ ಜಾಲತಾಣ ಇದಾಗಿದೆ ಎಂದು ವೆಬ್ ತಾಣ ಸೃಷ್ಟಿಕರ್ತೆ ಅಲೆಕ್ಸಾಂಡ್ರಾ ಚೊಂಗ್ ಹೇಳುತ್ತಾರೆ.
ಸುಮಾರು 70 ದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಕರು ಈ ವೆಬ್ ತಾಣಕ್ಕೆ ಸೇರಿದ್ದಾರೆ. ಅದರೆ, ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹುಡುಗರು ಹುಡುಗಿಯ ವೇಷದಲ್ಲಿ ಈ ತಾಣಕ್ಕೆ ಎಂಟ್ರಿ ಪಡೆದರೆ ತಡೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.












Click it and Unblock the Notifications