ಮಕ್ಕಳೇ ಫೇಸ್ ಬುಕ್ ಬಳಸಬೇಡಿ: ಪುತ್ರಿಯರಿಗೆ ಒಬಾಮಾ ಕಿವಿಮಾತು
ವಾಷಿಂಗ್ಟನ್,
ಡಿ.18: ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್ ಬುಕ್ ಅನ್ನು ಬಳಸದಿರುವಂತೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಇಬ್ಬರು ಪುತ್ರಿಯರಿಗೆ ತಾಕೀತು ಮಾಡಿದ್ದಾರೆ. 'ನಮ್ಮ ಬಗ್ಗೆ ಅಪರಿಚಿತರೂ ತಿಳಿದುಕೊಳ್ಳುವ ಸಾಧ್ಯತೆಯಿದ್ದು, ಅದು ನಮಗೆ ಅಪಾಯಕಾರಿಯಾಗಲಿದೆ. ಆದ್ದರಿಂದ ಮಕ್ಕಳೇ ನೀವು ಫೇಸ್ ಬುಕ್ ಬಳಸುವುದು ಬೇಡ' ಎಂದು ಒಬಾಮಾ ತಮ್ಮ ಮಕ್ಕಳಿಗೆ ತಿಳಿಯ ಹೇಳಿದ್ದಾರೆ. id="toptextpromo">'ನಮ್ಮ
ಖಾಸಗಿ ಜೀವನದ ಸಂಗತಿಗಳನ್ನು ಸಾರ್ವಜನಿಕವಾಗಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇದರ ದುರ್ಬಳಕೆಯೇ ಹೆಚ್ಚು' ಎಂದು 13 ವರ್ಷದ ಮಲಿಯಾ ಮತ್ತು 10 ವರ್ಷದ ಸಾಶಾಗೆ ಒಬಾಮಾ ಕಿವಿಮಾತು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಚಿತ್ರವೆಂದರೆ
ಚುನಾವಣೆ ಸಂದರ್ಭದಲ್ಲಿ ಇದೇ ಒಬಾಮಾ ಅವರು ಸಾಮಾಜಿಕ ಅಂತರ್ಜಾಲ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಮತ್ತು ಯಥೇಚ್ಛವಾವಾಗಿ ಬಳಸಿಕೊಂಡಿದ್ದರು. ಅಷ್ಟೇ ಅಲ್ಲ. ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿರುವ ಒಬಾಮಾ ಮತ್ತೆ ಇಂತಹ ವೇದಿಕೆಗಳಿಗೆ ಗಂಟು ಬಿದ್ದಿದ್ದಾರೆ.











Click it and Unblock the Notifications