ಯಡಿಯೂರಪ್ಪ ಸಿಎಂ ಕನಸಿಗೆ ತಣ್ಣೀರೆರಚಿದ ಅಡ್ವಾಣಿ

ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ರಾಷ್ಟ್ರೀಯ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ ನಂತರ ಅಡ್ವಾಣಿ ಅವರನ್ನೂ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದು.
ಆದರೆ, ಯಡಿಯೂರಪ್ಪ ಅವರ ಬೇಡಿಕೆಗೆ ಸೊಪ್ಪು ಹಾಕದ ಅಡ್ವಾಣಿ ಅವರು ಮೊದಲು ನಿಷ್ಕಳಂಕಿತರಾಗಿ ಬನ್ನಿ ಹೋಗಿ ಎಂದು ಕಳಿಸಿದ್ದಾರೆ. ದೇಶದ ಎಲ್ಲೆಡೆ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಆರೋಪಿತರಾದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸುವುದು ಸರಿಯಾದ ಕ್ರಮವಲ್ಲ ಎಂದು ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಸಂಸದರಾದ ಅನಂತ ಕುಮಾರ್, ಪ್ರಹ್ಲಾದ್ ಜೋಶಿ, ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಗಿ ಜೊತೆಗೆ ಸದಾನಂದ ಗೌಡ ಯಡಿಯೂರಪ್ಪ ಬೆಂಬಲಿತ ಪತ್ರಕ್ಕೆ ಸಹಿ ಹಾಕಿಲ್ಲ. ಆದರೆ, ರಾಮುಲು ಬಣದ ಜೆ ಶಾಂತಾ ಹಾಗೂ ಸಣ್ಣ ಫಕೀರಪ್ಪ ಅವರು ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗಲು ನಮ್ಮ ಅಡ್ಡಿಯಿಲ್ಲ ಎಂದು ಸಹಿ ಹಾಕಿದ್ದರು.












Click it and Unblock the Notifications