ಅಪ್ಪ ಮಗಳು ಸೇರಿ 120 ದೇವಾಲಯಗಳಿಗೆ ಕನ್ನ

ಈರೋಡ್ ನಗರದಿಂದ ನಲವತ್ತು ಕಿಲೋಮೀಟರ್ ದೂರದ ಶಿವಗಿರಿ ಗ್ರಾಮದ ಮಂದಿರವೊಂದರಲ್ಲಿ ಚಿನ್ನದ ಸರವನ್ನು ಕದಿಯುತ್ತಿದ್ದಾಗ ಪೋಲೀಸರ ಬಲೆಗೆ ಬಿದ್ದಿದ್ದಾರೆ. ನಂತರ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಈ ವರೆಗೆ ಇವರು ಸುಮಾರು 120 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಚಿನ್ನಾಭರಣ ಕದ್ದಿದ್ದಾರೆಂದು ಬಾಯಿ ಬಿಟ್ಟಿದ್ದಾರೆ.
ಶಿವಗಿರಿ ಗ್ರಾಮದ ಮಂದಿರದಲ್ಲಿ 250 ಗ್ರಾಂ ಚಿನ್ನದ ಸರವನ್ನು ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದಾಗ ಪೊಲೀಸರು ಅಪ್ಪ ಮಗಳನ್ನು ಬಂಧಿಸಿದ್ದಾರೆ. ಹಲವಾರು ವರ್ಷಗಳಿಂದ ಕಳ್ಳತನವನ್ನೇ ಕಸುಬಾಗಿರಿಸಿ ಕೊಂಡು ಐಷಾರಾಮಿ ಬದುಕು ನಡೆಸುತ್ತಿದ್ದರು.
ಹೆಚ್ಚಾಗಿ ನಗರದ ಹೊರವಲಯದಲ್ಲಿರುವ ದೇವಾಲಯಗಳನ್ನು ಗುರಿಯಾಗಿರಿಸಿ ಕೊಂಡು ದ್ವಿಚಕ್ರ ವಾಹನದ ಮೂಲಕ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಹೊಸ ಗಾಡಿ ಪೂಜೆ ಮಾಡಬೇಕೆಂದು ಅರ್ಚಕರನ್ನು ಹೊರ ಕರೆದು, ಇಬ್ಬರಲ್ಲಿ ಒಬ್ಬರು ಒಳಗಡೆಗೆ ಹೋಗಿ ದೇವರ ಮೂರ್ತಿಗೆ ಹಾಕಿರುವ ಚಿನ್ನಾಭರಣಗಳನ್ನು ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications