ಚಿನ್ನದ ಬೆಲೆ ದಿಢೀರ್ ಕುಸಿತ, ಗ್ರಾಹಕ ದಿಲ್ ಖುಷ್

ಕಳೆದ ಎರಡು ದಿನಗಳಿಂದ ಸತತವಾಗಿ ಚಿನ್ನದ ಬೆಲೆ ಕುಸಿಯುತ್ತಿದ್ದು ಪ್ರತಿ 10 ಗ್ರಾಂಗೆ ಸುಮಾರು 1,500 ರು ಕಡಿಮೆಯಾಗಿದೆ.
ಗುರುವಾರ 10 ಗ್ರಾಂಗೆ 800 ರು ಕಮ್ಮಿಯಾಗಿತ್ತು. ಶುಕ್ರವಾರ ಪುನಃ ಕುಸಿತ ಕಂಡು 700 ರು ಕಡಿಮೆಯಾಗಿದೆ.
24 ಕ್ಯಾರೆಟ್ ಬೆಲೆ ಚಿನ್ನದ ಬೆಲೆ ಪ್ರತಿ 10 ಗ್ರಾಂ 27,790.00 ಹಾಗೂ 22K ಚಿನ್ನದ ಬೆಲೆ 25,540.00 ನಷ್ಟಿದೆ.
ಮುಂಬೈ ನಲ್ಲಿ 24K ಚಿನ್ನದ ಬೆಲೆ 27,680 ರು ಹಾಗೂ 22K ಚಿನ್ನದ ಬೆಲೆ 25,550 ರು ಇದೆ.
ಬೆಳ್ಳಿ ಕೂಡಾ 3,200 ರು ನಷ್ಟು ಕುಸಿತ ಕಂಡಿದ್ದು, ಪ್ರತಿ ಕೆಜಿಗೆ 52,600 ರು ಆಗಿದೆ.












Click it and Unblock the Notifications