ಮಾಜಿ ಸಿಎಂ ಯಡಿಯೂರಪ್ಪ ಫಸ್ಟ್, ಶೋಭಕ್ಕಾ ಲಾಸ್ಟ್

ಅದರಲ್ಲಿ ಅತಿ ಹೆಚ್ಚು ಭತ್ಯೆ ಪಡೆದು ಕೊಂಡು ಮೊದಲ ಸ್ಥಾನದಲ್ಲಿ ರಾರಾಜಿಸುತ್ತಿರುವವರು ಮಾಜಿ ಸಿಎಂ ಯಡಿಯೂರಪ್ಪ. ಅವರು ಪಡೆದುಕೊಂಡ ಭತ್ಯೆಯ ಮೊತ್ತ ಹೆಚ್ಚು ಕಮ್ಮಿ 46 ಲಕ್ಷ. ಅತಿ ಕಡಿಮೆ ಭತ್ಯೆ ಪಡೆದುಕೊಂಡವರು ಯಾರೆಂದರೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಅವರು ಪಡೆದುಕೊಂಡಿದ್ದು ಹನ್ನೆರಡುವರೆ ಲಕ್ಷ ರೂಪಾಯಿ ಮೇಲೆ ಸ್ವಲ್ಪ ಹೆಚ್ಚು.
ಗೋಕಾಕ್ ತಾಲೂಕಿನ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಎನ್ನುವವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದ ಮಾಹಿತಿಯಲ್ಲಿ ಸಚಿವರುಗಳ ಪ್ರಯಾಣ ಭತ್ಯೆ ಅಂಕಿಅಂಶ ಬಹಿರಂಗವಾಗಿದೆ. ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯ ಟೆಂಡರ್ ಪ್ರಕಾರ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುತ್ತಿಗೆದಾರರಿಗೆ ಸರಕಾರ ಇನ್ನೂ ಸಾವಿರಾರು ಕೋಟಿ ಹಣ ಪಾವತಿಸಬೇಕಾಗಿದೆ.
ರಾಜ್ಯ ಸರಕಾರದ ನೌಕರರಿಗೆ ನಿಯಮ ಪ್ರಕಾರ ನೀಡಬೇಕಾದ ಭತ್ಯೆಯನ್ನು ನೀಡದೇ ಇತ್ತೀಚಿಗೆ ಶಾಸಕರ ವೇತನ ಭತ್ಯೆಯನ್ನು ಸುಗ್ರೀವಾಜ್ಞೆ ಮೂಲಕ ಮನ ಬಂದಂತೆ ಹೆಚ್ಚಿಸಿಕೊಂಡಿದೆ. ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಹಣವನ್ನು ರಾಜಕಾರಿಗಳು ಈ ರೀತಿಯಾಗಿ ಪೋಲು ಮಾಡುತ್ತಿದ್ದಾರೆಂದು ಎಂದು ಭೀಮಪ್ಪ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.












Click it and Unblock the Notifications