ಯುವತಿಯ ಮೇಲೆ ಅತ್ಯಾಚಾರವೆಸಗಿದ ಕ್ಯಾಬ್ ಡ್ರೈವರ್

ಮೆಹ್ರೋಲಿಯಲ್ಲಿ ಮಂಗಳವಾರ ಬೆಳಗಿನ ಜಾವ 3 ಗಂಟೆಯಲ್ಲಿ ಈ ಘಟನೆ ನಡೆದಿದೆ. ಪಬ್ ನಲ್ಲಿ ರಾತ್ರಿ ಪಾಳಿ ಮುಗಿಸಿ ವಸಂತಕುಂಜ್ ಭಾಗದಲ್ಲಿರುವ ಮನೆಗೆ ವಾಪಸಾಗಲು ಕ್ಯಾಬ್ ಸೇವೆ ಪಡೆದ ಈ ಯುವತಿಯ ಮೇಲೆ ಕ್ಯಾಬ್ ಚಾಲಕ ಅತ್ಯಾಚಾರವೆಸಗಿದ್ದಾನೆ.
ಉತ್ತರರ ಪ್ರದೇಶ ಮೂಲದ ಈ ಯುವತಿಯನ್ನು ಮಾರ್ಗ ಮಧ್ಯೆ ಛತ್ತಾಪುರದಲ್ಲಿ ನಿರ್ಜನ ವಸತಿ ಪ್ರದೇಶಕ್ಕೆ ಕರೆದೊಯ್ದ ಆರೋಪಿ ಶಿವಕುಮಾರ್ ಆಕೆಯ ಮೇಲೆ ರೇಪ್ ಮಾಡಿ, ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಹೋಗುವ ಮುನ್ನ ಪೊಲೀಸರಿಗೆ ವಿಷಯ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ.
ಆದರೆ ಬಾಧಿತ ಯುವತಿ ಪೊಲೀಸರಿಗೆ ದೂರು ನೀಡಲಾಗಿ, ಅಖಿಲ ಭಾರತ ವೈದ್ಯಕೀಯ ಮಹಾಸಂಸ್ಥೆಯಲ್ಲಿ (AIIMS) ಪರೀಕ್ಷೆ ಮಾಡಿದಾಗ ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಯುವತಿ ನೀಡಿದ ಮಾಹಿತಿಯನ್ನಾಧರಿಸಿ, ಕ್ಯಾಬ್ ಚಾಲಕ ಶಿವಕುಮಾರನನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications