ದಲಿತ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್

ಹತ್ತನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯ ಬಹಿರ್ದೆಶೆಗೆಂದು ಮನೆಯಿಂದ ಹೊರಬಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಹುಡುಗಿ ಮನೆಯಿಂದ ಹೊರ ಬರುವ ವೇಳೆಗಾಗಿ ಕಾಯುತ್ತಿದ್ದು, ಹೊಂಚು ಹಾಕಿ ಈ ಕೃತ್ಯ ನಡೆಸಿದಂತೆ ತೋರುತ್ತಿದೆ.
'ಕಲಾವತಿ ಗ್ರಾಮಸ್ಥರು ಊರಿನ ಹುಡುಗರ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಬೇರೆ ಊರಿನ ಹುಡುಗರ ಕೈವಾಡ ಇರಬಹುದು ಎಂದು ಶಂಕಿಸಿದ್ದಾರೆ. ಮೂವರು ಅನಾಮಿಕರು ಆಕೆಯನ್ನು ಹತ್ತಿರದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸೆಗಿದ್ದಾರೆ' ಎಂದು ಆರೋಪ ಹೊರೆಸಿ ದೂರು ನೀಡಲಾಗಿದೆ.
ಹುಡುಗಿಯ ಮೇಲೆ ಅತ್ಯಾಚಾರವಾಗಿರುವುದು ವೈದ್ಯಕೀಯ ಪರೀಕ್ಷಾ ವರದಿಯ ನಂತರ ದೃಢಪಟ್ಟಿದೆ. ಆರೋಪಿಗಳು ನಾಪತ್ತೆಯಾಗಿದ್ದು, ತನಿಖೆ ಜಾರಿಯಲ್ಲಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.












Click it and Unblock the Notifications