ಫಲಿಸಿತು ಮಲ್ಯ ಐಡ್ಯಾ, ಕಿಂಗ್ ಫಿಷರ್ ಸಿಕ್ತು ರಿಲೀಫ್

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶೇ. 26 ಹೂಡಿಕೆಗೆ ಒಪ್ಪಿಗೆ ಸೂಚಿಸಿರುವುದು ಜೆಟ್ ಏರ್ ಲೈನ್ಸ್ ಹಾಗೂ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆಗಳಿಗೆ ವರದಾನವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ವಿಮಾನಯಾನ ಕ್ಷೇತ್ರದ ದಿಗ್ಗಜ ಕಿಂಗ್ ಫಿಶರ್ ಸಂಸ್ಥೆ ಒಡೆಯ ಡಾ. ವಿಜಯ್ ಮಲ್ಯ ಅವರು ಸಂಸ್ಥೆ ಆರ್ಥಿಕ ಸುಧಾರಣೆಗೆ ವಿದೇಶಿ ಬಂಡಾವಳ ಹೂಡಿಕೆಯೊಂದೇ ಪರಿಹಾರ ಎಂದು ಪ್ರಸ್ತಾವನೆಯನ್ನು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಗೆ ಕಳಿಸಿದ್ದರು.
ಈ ಪ್ರಸ್ತಾವನೆಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಯೋಜನಾ ಆಯೋಗದ ಸಮ್ಮತಿ ಸಿಕ್ಕಿದೆ. ಸೆಬಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿ ಹಣಕಾಸು ಸಚಿವಾಲಯ ಕೂಡ ಈ ಪ್ರಸ್ತಾವನೆಗೆ ಸಮ್ಮತಿಸಿದೆ.
ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬೀಳುತ್ತಿದ್ದಂತೆ ಕಿಂಗ್ ಫಿಷರ್ ಷೇರುಗಳು ನಿಧಾನವಾಗಿ ಮೇಲ್ಮುಖ ಕಾಣುತ್ತಿದೆ. ಈವರೆಗೂ ಕಾರ್ಗೋ ಕ್ಷೇತ್ರದಲ್ಲಿ ಮಾತ್ರ ವಿದೇಶಿ ಬಂಡವಾಳ ಹೂಡಿಕೆಗೆ ಸಮ್ಮತಿಸಲಾಗಿತ್ತು.












Click it and Unblock the Notifications