ಬೆಂಗಳೂರಲ್ಲಿ ತಾಂತ್ರಿಕ ಕೇಂದ್ರ ತೆರದ ಮೈಕ್ರೋಸಾಫ್ಟ್

Microsoft opens center in Bangalore
ಬೆಂಗಳೂರು, ಡಿ.9: ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ಕೊನೆಗೂ ಭಾರತದ 'ಐಟಿ ಹಬ್' ಬೆಂಗಳೂರಿನಲ್ಲಿ ತನ್ನ ಅಧಿಕೃತ ಕೇಂದ್ರವನ್ನು ಆರಂಭಿಸಿದೆ.

ವಿಶ್ವದಾದ್ಯಂತ ಇರುವ ಗ್ರಾಹಕರಿಗೆ ಕನ್ಸಲ್ಟೆನ್ಸಿ ಹಾಗೂ ಎಂಟರ್ ಪ್ರೈಸ್ ಸಂಬಂಧಿತ ಸೇವೆ ನೀಡಲು ಈ ಕೇಂದ್ರ ಬಳಕೆಯಾಗಲಿದೆ ಎಂದು ಮೈಕ್ರೋಸಾಫ್ಟ್ ಪ್ರಕಟಿಸಿದೆ.

2005ರಲ್ಲೇ ಹೈದರಾಬಾದಿನಲ್ಲಿ ಕೇಂದ್ರ ಆರಂಭಿಸಿದ್ದ ಮೈಕ್ರೋಸಾಫ್ಟ್, ಬೆಂಗಳೂರಿನಲ್ಲಿ ಈ ರೀತಿ ಸೌಲಭ್ಯವಿರುವ ಕಚೇರಿ ಆರಂಭಿಸಲು ಕೊನೆಗೂ ಮನಸ್ಸು ಮಾಡಿದೆ. 65ಕ್ಕೂ ಅಧಿಕ ದೇಶಗಳಲ್ಲಿನ ತನ್ನ ಕಚೇರಿಗಳೊಡನೆ ಈ ಕಚೇರಿ ನಿರಂತರ ಸಂಪರ್ಕದಲ್ಲಿರುತ್ತದೆ.

ಉನ್ನತ ತಂತ್ರಜ್ಞಾನ, ಆಫೀಸ್ 365 ಮತ್ತು ಬಹುಬೇಡಿಕೆಯ ವಿಂಡೋಸ್ 7 ಅಳವಡಿಕೆ, ದೂರುಗಳು, ಸುಧಾರಣೆ ಬಗ್ಗೆ ಸ್ಥಳೀಯ ತಂಡ ಹೆಚ್ಚಿನ ಮಹತ್ವ ನೀಡಿ ಕಾರ್ಯ ನಿರ್ವಹಿಸಲಿದೆ ಎಂದು ಗ್ಲೋಬಲ್ ಡೆಲಿವರಿ ಪ್ರಧಾನ ವ್ಯವಸ್ಥಾಪಕ ಅಮಿತ್ ಸಿರ್ಕಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+