ಉಡುಪಿ : ದಕ್ಷಿಣ ಭಾರತದ ಭಯೋತ್ಪಾದನಾ ಕಾರ್ಖಾನೆ

ಬೇಹಾಗಾರಿಕಾ ಸಂಸ್ಥೆಯ ಮೂಲಗಳ ಪ್ರಕಾರ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಪುಣೆಯ ಜರ್ಮನ್ ಬೇಕರಿಯಲ್ಲಿ ಸ್ಫೋಟಗಳಲ್ಲಿ ಬಳಸಲಾದ ಸ್ಫೋಟಕಗಳನ್ನು ಉಡುಪಿಯಿಂದ ಪೂರೈಸಲಾಗಿತ್ತು. ಉಡುಪಿ ದಕ್ಷಿಣ ಭಾರತದಲ್ಲೇ ಅತ್ಯಂತ ಸುರಕ್ಷಿತ ತಾಣವಾಗುತ್ತಿದೆ ಎಂದು ಸಂಸ್ಥೆ ಬಹಿರಂಗಪಡಿಸಿದೆ.
2008ರಲ್ಲಿ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಚಟುವಟಿಕೆಗಳ ಕುರಿತು ನಡೆಸಿದ ತನಿಖಾ ಸಮಯದಲ್ಲಿಯೇ ಉಡುಪಿಯ ಹೆಸರು ಕೇಳಿಬಂದಿತ್ತು. ಆದರೆ, ಈ ತನಿಖೆಯಲ್ಲಿ ಉಡುಪಿ ಉಗ್ರರಿಗೆ ಅಸ್ತ್ರಗಳನ್ನು ಸುಲಭವಾಗಿ ಸಾಗಿಸುವ ನೆಲೆಯಾಗಿರುವುದು ಅತ್ಯಂತ ನಿಖರವಾಗಿದೆ ಎಂದು ಇಂಟೆಲಿಜೆನ್ಸ್ ಏಜೆನ್ಸಿ ಹೇಳಿದೆ.
ಬಂಧಿತರಾಗಿರುವ 6 ಭಯೋತ್ಪಾದಕ ಪೈಕಿ ಸಿದ್ದಿ ಬಪ್ಪಾ ಅಲಿಯಾಸ್ ಶಾರುಖ್ ಅಲಿಯಾಸ್ ಯಾಸಿನ್ ಭಟ್ಕಳ್, ಬೆಂಗಳೂರು ಮತ್ತು ಪುಣೆ ಸ್ಫೋಟಗಳಿಗೆ ಉಡುಪಿಯಿಂದಲೇ ಸ್ಫೋಟಕ ಪೂರೈಕೆಯಾಗಿತ್ತು ಎಂದು ಬಾಯಿಬಿಟ್ಟಿದ್ದಾನೆ. ಹೆಚ್ಚಿನ ತನಿಖೆಯಾಗಿ ಉಗ್ರರಲ್ಲಿ ಕೆಲವರನ್ನು ಉಡುಪಿಗೆ ತರಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications