ದುಬೈನಲ್ಲಿ ನವವಿವಾಹಿತೆ ಸ್ಮಿತಾ ರೈ ಸಾವು: ಪ್ರೇಮ ವೈಫಲ್ಯ

ಸ್ಥಳದಲ್ಲಿ ಸ್ಮಿತಾ ಬರೆದಿರುವರೆನ್ನಲಾದ ಪತ್ರವೊಂದು ಲಭಿಸಿದ್ದು ಅದರಲ್ಲಿ ತಾನು ಉಜಿರೆಯಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಸಾಧ್ಯವಾಗದೇ ಇದ್ದುದರಿಂದ ಈ ಕೃತ್ಯ ಎಸಗುತ್ತಿದ್ದೇನೆ ಎಂದು ಬರೆಯಲಾಗಿದೆ ಎನ್ನುವ ಮಾಹಿತಿ ದೊರೆತಿದೆ.
ಮೃತ ಸ್ಮಿತಾ ರೈ (25), ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪುತ್ತೂರು ತಾಲೂಕಿನ ಕಡಬದ ಪೈ ಕಾಂಪೌಂಡ್ ನಿವಾಸಿ ಎನ್.ಕೆ. ನಾರಾಯಣ ರೈ ಅವರ ಪುತ್ರಿ. ಎಂಎ ಪದವೀಧರೆಯಾಗಿದ್ದ ಸ್ಮಿತಾ ಅವರನ್ನು ಪರ್ಪುಂಜ ವಿಶ್ವನಾಥ ರೈ ಪುತ್ರ ನವೀನ್ ರೈ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು.
ಕಳೆದ ಅ. 16 ರಂದು ಪುತ್ತೂರು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಇವರ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನೆರೆವೇರಿತ್ತು. ನವೀನ್ ರೈ ದುಬೈಯಲ್ಲಿ ಇಟಲಿ ಮೂಲದ ಕಂಪನಿ ಉದ್ಯೋಗಿ. ನವೀನ್ ರೈ ದುಬೈಯಲ್ಲಿ ಫ್ಲಾಟ್ ಒಂದರಲ್ಲಿ ವಾಸ್ತವ್ಯವಿದ್ದು ಅವರು ಕೆಲಸಕ್ಕೆ ಹೊದ ಬಳಿಕ ಸ್ಮಿತಾ ಒಬ್ಬಂಟಿಳಾಗಿ ಇರುತ್ತಿದ್ದರು.
ಸ್ಮಿತಾ ಮೃತ ದೇಹವನ್ನು ಇಂದು ಭಾರತಕ್ಕೆ ತಂದು, ಸಂಜೆ ವೇಳೆಗೆ ಮಡಿಕೇರಿಯಲ್ಲಿ ಆಕೆಯ ತಾಯಿ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.











Click it and Unblock the Notifications