ಪಾಕ್ ಗಡಿ ಬೇಲಿ ಹಾರಿದ ಭಾರತದ ಮಂಗ ಸೆರೆ

Indian Monkey arrested by Pakistan
ಪಂಜಾಬ್, ಡಿ.5: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಒಂದು ತಮಾಷೆ ಪ್ರಸಂಗ ನಡೆಯಿತು. ಭಾರತದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಛೋಲಿಸ್ತಾನ್ ಭಾಗದಲ್ಲಿ ಭಾರತದ ಮಂಗವೊಂದು ಗಡಿ ಬೇಲಿ ದಾಟಿ ಪಾಕಿಸ್ತಾನಕ್ಕೆ ಹಾರಿ, ಗೊಂದಲದ ವಾತಾವರಣ ಸೃಷ್ಟಿ ಮಾಡಿದೆ.

ಬಹವಲ್ಪುರ ಜಿಲ್ಲೆಯಲ್ಲಿ ಕಾಣಿಸಿಕೊಂಡ ಭಾರತದ ಮಂಗನನ್ನು ಹಿಡಿಯಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಆದರೆ,ಯಾರಿಗೂ ಸಿಗದಂತೆ ಆಟ ಆಡಿಸುತ್ತಿದ್ದ ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಮೊರೆ ಹೋಗಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಕೂಡಾ ಸಾಕಷ್ಟು ಬೆವರಿಳಿಸಿಕೊಂಡ ಮೇಲೆ ಮಂಗ ಅವರ ಕೈಗೆ ಸಿಕ್ಕಿದೆ.

ಭಾರತದ ಕೋತಿ ಈಗ ಬಹವಲ್ಪುರ ಜೂನಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿದೆ. ಸ್ಥಳೀಯರ ಆಕರ್ಷಣೆಯಾಗಿರುವ ಈ ಹೊಸ ಅತಿಥಿಗೆ 'ಬಾಬ್ಬಿ' ಎಂದು ನಾಮಕರಣ ಮಾಡಲಾಗಿದೆ ಎಂದು ಪ್ರಾಣಿ ಸಂಗ್ರಹಾಲಯದ ಉಸ್ತುವಾರಿ ವಹಿಸಿಕೊಂಡಿರುವ ಮಹಮ್ಮದ್ ಇಕ್ಬಾಲ್ ಹೇಳಿದ್ದಾರೆ.

ಈ ಮಂಗ ತುಂಬಾ ಚತುರ, ಸುಮಾರು ನಾಲ್ಕು ವರ್ಷ ವಯಸ್ಸಾಗಿರಬಹುದು ಅಷ್ಟೇ. ಜೂ ಗೆ ಬಂದಾ ಕೆಲ ಸಮಯದಲ್ಲೇ ಗೆಳೆಯರನ್ನು ಸಂಪಾದಿಸಿಬಿಟ್ಟಿದ್ದಾನೆ. ಈ ರೀತಿ ಮಂಗವೊಂದು ಬಾರ್ಡರ್ ದಾಟಿ ಬಂದದ್ದು ಇದೇ ಮೊದಲು.

ಇದಕ್ಕೂ ಮುನ್ನ ಪಾರಿವಾಳ, ಹದ್ದು ಮುಂತಾದ ಪಕ್ಷಿಗಳು ಗಡಿಭಾಗದಲ್ಲಿ ಕಂಡು ಬಂದಾಗ ಗಡಿಭಾಗದ ಸೈನಿಕರು ಬಂಧಿಸಿ, ವಿಚಾರಣೆ ನಡೆಸಿದ ಉದಾಹರಣೆಗಳಿವೆ.

ಇದು ಬೇಹುಗಾರಿಕೆಯ ಮಂಗ ಎಂದು ಎನಿಸುತ್ತಿಲ್ಲ ಎಂದು ಪಾಕ್ ಸೈನಿಕರು ಕೂಡಾ ಬಾಬ್ಬಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+