ಶ್ರೀಲಕ್ಷ್ಮಿಗೆ ಬೇಲ್ ಸಿಗೋದು ಮೊದಲೇ ಗೊತ್ತಿತ್ತೇ?

ಸಿಬಿಐ ವಶದಲ್ಲಿ ಮೂರು ದಿನಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದ ಶ್ರೀಲಕ್ಷ್ಮಿ, ಚಂಚಲಗೂಡ ಜೈಲು ಸೇರಿ ವಿಚಾರಣಾಧೀನ ಕೈದಿ ಸಂಖ್ಯೆ 4332 ಪಡೆದ ಕೆಲ ಗಂಟೆಗಳ ನಂತರ ಜೈಲಿನಿಂದ ಹೊರಬಿದ್ದಿದ್ದರು.
ಪ್ರಭಾವಿ ನಾಯಕ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ್ ಅವರು ಜೈಲಿನಲ್ಲೇ ಕಾಲದೂಡುತ್ತಿರುವ ಸಂದರ್ಭದಲ್ಲಿ ಪ್ರಕರಣದ ಪ್ರಮುಖ ಪಾತ್ರಧಾರಿಯಾದರೂ ಶ್ರೀಲಕ್ಷ್ಮಿಗೆ ಜಾಮೀನು ನೀಡಲು ಕಾರಣವೇನು ಎಂಬುದರ ಬಗ್ಗೆ ಚರ್ಚೆ ನಡೆದಿದೆ.
ಮೊದಲಿಗೆ ಪ್ರತಿಭಾವಂತ ಮಹಿಳಾ ಅಧಿಕಾರಿ, ಅನಾರೋಗ್ಯ ಪೀಡಿತೆ ಹಾಗೂ ತನಿಖೆ ಕಳೆದ ವರ್ಷದಿಂದ ನಡೆದಿದ್ದು, ಚಾರ್ಜ್ ಶೀಟ್ ಸಲ್ಲಿಸುವ ಹಂತ ತಲುಪಿದೆ ಹಾಗೂ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂಬ ಅಂಶಗಳನ್ನು ಮನಗಂಡು ಷರತ್ತುಬದ್ಧ ಜಾಮೀನು ನೀಡಲಾಗಿದೆ.
ಜೈಲಿಗೆ ಹೋದ ಶ್ರೀಲಕ್ಷ್ಮಿ ತನ್ನೊಟ್ಟಿಗೆ ಯಾವುದೇ ಉಡುಗೆ ತೊಡುಗೆಯನ್ನು ಕೊಂಡೊಯ್ದಿರಲಿಲ್ಲ. ಐಪಿಎಸ್ ಪತಿ ಜಗದೀಶ್ ಆಗಲಿ ಇತರೆ ಸಂಬಂಧಿಕರಾಗಲಿ ಜೈಲಿಗೆ ಬಂದು ರೋದಿಸಿದ ದೃಶ್ಯ ದಾಖಲಾಗಿಲ್ಲ. ಹೀಗೆ ಬಂದು ಹಾಗೆ ಹೋದ ಹಾಗೆ ಶ್ರೀಲಕ್ಷ್ಮಿ ಅವರು ಜೈಲಿಗೆ ಹೋಗಿ ಬಂದ ಶಾಸ್ತ್ರ ಮುಗಿಸಿದ್ದಾರೆ.
ಇನ್ನೂ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದನ್ನು ಹಿಂಪಡೆಯಲು ಸಿಎಂ ಕಿರಣ್ ಕುಮಾರ್ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿಯಿದೆ. ಈ ಕಾರಣ ಕೂಡಾ ಜೈಲಿನಿಂದ ಹೊರಬೀಳಲು ಸಹಾಯಕವಾಗಿದೆ ಎನ್ನಲಾಗಿದೆ.












Click it and Unblock the Notifications