ಮುಗಿಲುಮುಟ್ಟಿದ ರೆಡ್ಡಿ-ರಾಮುಲು ಅಭಿಮಾನಿಗಳ ಹರ್ಷ

ಸಂಸದೆ ಶಾಂತಾ ಅವರು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕುತ್ತಾ, ಒಂದೇ ಸಮನೆ ಶಿಳ್ಳೆ ಹಾಕಿ ಸಂಭ್ರಮಿಸಿದರು. ಬಿಜೆಪಿಯ ಅಪಾರ ನಿರೀಕ್ಷೆಗೆ ತಣ್ಣೀರೆರೆಚಿರುವ ಬಳ್ಳಾರಿಯ ಮತದಾರ ಪ್ರಭುಗಳು ಬಳ್ಳಾರಿಯಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡಿದ್ದಾರೆ. ಬಿಜೆಪಿಯ ಗಾದಿ ಲಿಂಗಪ್ಪಗೆ ಠೇವಣಿ ನಷ್ಟ ಕಟ್ಟಿ ಕೊಟ್ಟಿದ್ದಾರೆ. ಆಶ್ಚರ್ಯಕರವಾಗಿ ಕಾಂಗ್ರೆಸ್ ಅಭ್ಯರ್ಥಿ ರಾಮಪ್ರಸಾದ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಅಂತಿಮ ಮತ ಎಣಿಕೆ ವಿವರ:
ಶ್ರೀರಾಮುಲು (ಪಕ್ಷೇತರ) 74,527
ರಾಮಪ್ರಸಾದ್ (ಕಾಂಗ್ರೆಸ್) 27,737
ಗಾದಿ ಲಿಂಗಪ್ಪ (ಬಿಜೆಪಿ) 17,366
ಗಮನಾರ್ಹವೆಂದರೆ ರೆಡ್ಡಿ ಅಭಿಮಾನಿಗಳ ವಿಜಯದ ಸಪ್ಪಳ ಬಳ್ಳಾರಿಗೇ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ, ಗದಗ, ರಾಯಚೂರು, ಸಿಂಧನೂರು, ಕೊಪ್ಪಳದಲ್ಲೂ ಜೋರಾಗಿ ಕೇಳಿಬರುತ್ತಿದೆ. ಶ್ರೀರಾಮುಲು ಅಪ್ಪಟ ಜನನಾಯಕ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.












Click it and Unblock the Notifications