ಅಭ್ಯರ್ಥಿಗಳು ಥರಥರ; ಬಳ್ಳಾರಿ ಜಾಲಿಮುಳ್ಳು ಯಾರಿಗೆ ಚುಚ್ಚಲಿದೆಯೋ!?

bellary-rural-bypolls-result-contestants-worried
ಬಳ್ಳಾರಿ, ಡಿ.4: ರಾಜ್ಯ ರಾಜಕೀಯದಲ್ಲಿ ಇಂದು ಮಹತ್ವದ ದಿನ. ಸದ್ಯೋಭವಿಷ್ಯತ್ತಿನಲ್ಲಿ ರಾಜಕೀಯ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದಕ್ಕೆ ಇಂದು ಸ್ಪಷ್ಟ ರೂಪ ಸಿಗಲಿದೆ. ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ಫಲಿತಾಂಶ ಇದಕ್ಕೆ ಇಂಬು ನೀಡಿದೆ. ಇಂದಿನ ರೋಚಕ ರಾಜಕೀಯ ಬೆಳವಣಿಗೆಗಳ ಕುರಿತು 'ದಟ್ಸ್ ಕನ್ನಡ' ತಾಜಾ ತಾಜಾ ವರದಿಯನ್ನು ಬೆಳಗ್ಗೆ 8 ಗಂಟೆಯಿಂದಲೇ ಹೊತ್ತುತರುತ್ತಿದೆ. ಸೋ, 'ದಟ್ಸ್ ಕನ್ನಡ' ದತ್ತ ನಿಮ್ಮದೊಂದು ನೆಟ್ ನೋಟ ಇರಲಿ.

ಪ್ರಸಕ್ತ ವಿಧಾನಸಭೆಯ ಕಾಲಾವಧಿ ಅಂತಿಮ ಚರಣಕ್ಕೆ ಕಾಲಿಟ್ಟಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಹಿರಂಗವಾಗಲಿರುವ ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದ ದಿಕ್ಕುದೆಸೆಯನ್ನು ಬದಲಿಸಬಲ್ಲದು.

ಸೋ, ಕ್ಷೇತ್ರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಶ್ರೀರಾಮುಲು ಗೆದ್ದರೆ ಏನಾಗುತ್ತದೆ, ಆಡಳಿತಾರೂಢ ಬಿಜೆಪಿ ಗೆದ್ದರೆ ಏನಾಗುತ್ತದೆ ಅಥವಾ ಅತ್ತ ಕಾಂಗ್ರೆಸ್ ತನ್ನ ಹಳೆಯ ಕೋಟೆಯ ಮೇಲೆ ಮತ್ತೆ ಜಂಡಾ ಹೂಡಿದರೆ ಯಾರೆಲ್ಲ ಪತರಗುಟ್ಟುತ್ತಾರೆ ಎಂಬ ಕೌತುಕದ ಬೆಳವಣಿಗೆಗಳ ಬಗ್ಗೆ ವಿಶ್ಲೇಷಣೆಗಳೂ ಮೂಡಿಬರಲಿವೆ ದಟ್ಸ್ ಕನ್ನಡದಲ್ಲಿ.

ಸದ್ಯದ ಹವಾ ನೋಡಿದರೆ ಬಿಜೆಪಿ ಸೋಲಬೇಕು, ಶ್ರೀರಾಮುಲು ಗೆಲ್ಲಬೇಕು ಎಂಬ ಅಭಿಲಾಷೆ ಜನರಲ್ಲಿ ಬೇರೂರಿದೆ. ಇದರ ಹಿಂದಿನ ತರ್ಕಗಳು ಏನಿವೆಯೋ ಜನರೇ ಬಲ್ಲರು. ಆದರೆ ಮತದಾರ ಪ್ರಭು ಹೀಗೇ ಆಗಲಿದೆ ಎಂಬ ಸ್ಪಷ್ಟ ಸಂದೇಶ ನೀಡಿಯಾಗಿದೆ. ಅದು ಜಗತ್ತಿಗೆ ಗೊತ್ತಾಗಬೇಕಾಗಿದೆ, ಅಷ್ಟೇ. ಅದನ್ನು ನಿಮಗಾಗಿ ಹೊತ್ತುತರಲಿದೆ ದಟ್ಸ್ ಕನ್ನಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+