ಮಿಗ್-21 ಪತನ : ಪೈಲಟ್ ಪವಾಡಸದೃಶ ಪಾರು
ಸಿರಸಾ,
ಡಿ. 2 : ಅಭ್ಯಾಸ ಹಾರಾಟದಲ್ಲಿ ತೊಡಗಿದ್ದ ಮಿಗ್-21 ಯುದ್ಧ ವಿಮಾನ ಹರ್ಯಾಣಾದ ಸಿರಸಾ ಜಿಲ್ಲೆಯ ರಾಣಿಯಾ ತಾಲೂಕಿನ ಗ್ರಾಮವೊಂದರಲ್ಲಿ ಶುಕ್ರವಾರ ಮಧ್ಯಾಹ್ನ ದುರ್ಘಟನೆಗೀಡಾಗಿದ್ದು, ವಿಮಾನದ ಪೈಲಟ್ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. id="toptextpromo">ಈ
ದುರ್ಘಟನೆ ಮಧ್ಯಾಹ್ನ 1 ಗಂಟೆಗೆ ಜರುಗಿದೆ. ರೈತರು ತಮ್ಮ ಜಮೀನಿಗೆ ಬಿಡಬೇಕಿದ್ದ ನೀರನ್ನು ಶೇಕರಿಸಿಟ್ಟ ಸ್ಥಳದಲ್ಲಿ ಮಿಗ್-21 ವಿಮಾನ ಬಂದು ಬಿದ್ದಿದೆ. ಬಿದ್ದಕೂಡಲೆ ವಿಮಾನ ಧಗಧಗನೆ ಉರಿದಿದೆ. ಘಟನೆ ನಡೆದ ಅರ್ಧ ಕಿ.ಮೀ. ದೂರದಲ್ಲಿ ಪೈಲಟ್ ಪ್ಯಾರಾಶೂಟ್ ಮುಖಾಂತರ ಸುರಕ್ಷಿತವಾಗಿ ಇಳಿದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಂಕಿ
ನಂದಿಸಲು ಮೂರು ಅಗ್ನಿಶಾಮಕ ದಳದ ವಾಹನಗಳು ಬಂದು ಸತತ ಅರ್ಧ ಗಂಟೆಯ ಯತ್ನದ ನಂತರ ಬೆಂಕಿ ನಂದಿದೆ. ದುರ್ಘಟನೆಯ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸೇನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಕ್ವಾಡ್ರನ್ ಲೀಡರ್ ಜಯದೀಪ್ ಸಿಂಹ್ ಅವರ ವಿಚಾರಣೆಯನ್ನು ನಡೆಸಿದ್ದಾರೆ.











Click it and Unblock the Notifications