ಜೀಮೇಲ್, ಐಫೋನ್ ಬಳಕೆದಾರರೇ ಎಚ್ಚರ, ಎಚ್ಚರ!

ಮೇಲ್ಕಂಡ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಸುಮಾರು 287 ಫೈಲುಗಳನ್ನು ಹೊರ ಹಾಕಿರುವ ಅಸ್ಸಾಂಜ್, ವಿಕಿಲೀಕ್ಸ್ ಮೂಲಕ ಸುಮಾರು 150 ಕಂಪನಿಗಳ ಬಣ್ಣ ಬಯಲುಮಾಡಲು ಸಿದ್ಧರಾಗಿದ್ದಾರೆ.
ಈ ಕಂಪನಿಗಳು ತಮ್ಮ ಬಳಕೆದಾರರ ಮೊಬೈಲ್ ಫೋನ್ ಮಾಹಿತಿಗಳನ್ನು ಪಡೆದು ಮಾರಾಟ ಮಾಡಿಕೊಳ್ಳುತ್ತಿದೆ. ಈ
ಸಾಮೂಹಿಕ ಕಣ್ಗಾವಲು ಕೈಗಾರಿಕೆಯಲ್ಲಿ ಭಾರತದ ಸಂಪರ್ಕವೂ ಇರುವ ಶಂಕೆ ವ್ಯಕ್ತವಾಗಿದೆ. ಭಾರತದ ಪ್ರಮುಖ ಸಂಸ್ಥೆಯೊಂದು ಇಥಿಯೋಪಿಯಾ ಹಾಗೂ ಇತರೆ ಆಫ್ರಿಕಾ ದೇಶಗಳಿಗೆ ಮಾಹಿತಿ ಸೋರಿಕೆ ಮಾಡಿರುವ ಒಂದು ದಾಖಲೆ ಸಿಕ್ಕಿದೆ ಎಂದು ಅಸ್ಸಾಂಜ್ ಹೇಳಿದ್ದಾರೆ.
ಪ್ರಮುಖ ಕಂಪನಿಗಳಿಂದ ಮಾಹಿತಿ ಸೋರಿಕೆ ಫಲವಾಗಿ ಮಾಫಿಯಾ ಹಾಗೂ ಸರ್ವಾಧಿಕಾರಿಗಳ ಉಪಟಳ ಹೆಚ್ಚಾಗಿರುವ ಮಾಹಿತಿ ಸಿಕ್ಕಿದೆ ಎಂದು ಅಸ್ಸಾಂಜ್ ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications